ನಕಲಿ ಸಹಿ ಹಾಕಿ ಟ್ರಶರಿಯಿಂದ ಹಣ ಹಿಂಪಡೆದ ಪ್ರಕರಣ: ಫಾರೆಸ್ಟ್ ಆಫೀಸರ್ ಸೆರೆ

ಕಾಸರಗೋಡು: ಚೆಕ್‌ಗಳಲ್ಲಿ ನಕಲಿ ಸಹಿ ಹಾಕಿ ಟ್ರಶರಿಯಿಂದ ಹಣ ಹಿಂಪಡೆದುಕೊಂಡ ಆರೋಪದಂತೆ ಫಾರೆಸ್ಟ್ ಆಫೀಸರ್‌ನನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ. ಕಾಸರಗೋಡು ಸಬ್ ಟ್ರಶರಿ ಆಫೀಸರ್‌ರ ದೂರಿನಂತೆ ಸೆಕ್ಷನ್ ಫಾರೆಸ್ಟ್ ಆಫೀಸರ್  ಬಿಜು ಆಂಟನಿ ವಿರುದ್ಧ ಕಾಸರಗೋಡು ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಜೊತೆಗೆ ಕೆಲಸ ನಿರ್ವಹಿಸುತ್ತಿದ್ದ ತಲಶ್ಶೇರಿ ನಿವಾಸಿ ಆನಂದ್‌ರ ಎರಡು ಚೆಕ್‌ಲೀಫ್‌ಗಳನ್ನು ಪಡೆದು ಕೊಂಡ ಬಿಜು ಆಂಟನಿ ಆನಂದ್‌ರ ನಕಲಿ ಸಹಿ ಹಾಕಿ ಈತಿಂಗಳ 13ರಂದು 35 ಸಾವಿರ ರೂಪಾಯಿಗಳನ್ನು ಲಪಟಾ ಯಿಸಿರುವು ದಾಗಿ ಕೇಸು ದಾಖಲಿಸ ಲಾಗಿದೆ.  ಬಂಧಿತನಿಗೆ  ಕಾಸರಗೋಡು ಸಿಜೆಎಂ ನ್ಯಾಯಾಲಯ ರಿಮಾಂಡ್ ವಿಧಿಸಿದೆ.

Leave a Reply

Your email address will not be published. Required fields are marked *

You cannot copy content of this page