ಉಪ್ಪಳ, ಶಿರಿಯ ಹೊಳೆಗಳಲ್ಲಿ ನೀರಿನ ಮಟ್ಟ ಏರಿಕೆ: ಎಲ್ಲೋ ಅಲರ್ಟ್ ಜ್ಯಾರಿ

ಉಪ್ಪಳ: ಧಾರಾಕಾರ ಮಳೆಯಿಂದಾಗಿ ಉಪ್ಪಳ ಮತ್ತು ಶಿರಿಯ ಹೊಳೆಗಳಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹರಿಯತೊಡಗಿದ್ದು ಇದರಿಂದಾಗಿ ಜಲಮಟ್ಟ ಅಪಾಯಕಾರಿ ಸ್ಥಿತಿಯಲ್ಲಿ ಏರತೊಡಗಿದ್ದು, ಅದರಿಂದಾಗಿ ಪ್ರವಾಹದ ಭೀತಿ ಎದುರಾಗಿದೆ ಎಂದು ರಾಜ್ಯ ಕೃಷಿ ಇಲಾಖೆ ತಿಳಿಸಿದೆ. ಆ ಹಿನ್ನೆಲೆಯಲ್ಲಿ ಈ ಎರಡು ಪ್ರದೇಶಗಳಲ್ಲಿ ಇಲಾಖೆ ಎಲ್ಲೋ ಅಲರ್ಟ್ ಘೋಷಿಸಿದೆ. ಹೊಳೆಗಳ ತೀರ ಪ್ರದೇಶಗಳಲ್ಲಿ ವಾಸಿಸುತ್ತಿರುವವರು ಗರಿಷ್ಠ ಜಾಗ್ರತೆ ಪಾಲಿಸಬೇಕು. ಹೊಳೆಗಳಿಗೆ ಇಳಿಯುವುದಾಗಲೀ, ಅದನ್ನು ದಾಟುವುದಾಗಲೀ ಮಾಡಬಾರ ದೆಂದು ಇಲಾಖೆ ಸ್ಪಷ್ಟಪಡಿಸಿದೆ.

Leave a Reply

Your email address will not be published. Required fields are marked *

You cannot copy content of this page