ಎಡನೀರು ಶ್ರೀಗಳ ಪಂಚಮ ಚಾತುರ್ಮಾಸ್ಯ ವ್ರತಾಚರಣೆ ಜುಲೈ 10ರಿಂದ
ಎಡನೀರು: ಎಡನೀರು ಮಠದಲ್ಲಿ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಪಂಚಮ ಚಾತುರ್ಮಾಸ್ಯ ವ್ರತಾಚರಣೆ ಜುಲೈ 10ರಿಂದ ಸಪ್ಟಂಬರ್ 7ರ ತನಕ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. 10ರಂದು ಬೆಳಗ್ಗೆ 8ರಿಂದ ವ್ಯಾಸಪೂಜೆ, ಚಾತುರ್ಮಾಸ್ಯ ವ್ರತ ಸಂಕಲ್ಪ, ಹೋಮ ಗಳ ಪೂರ್ಣಾಹುತಿ ನಡೆಯಲಿದೆ. 9 ಗಂಟೆಯಿAದ 60 ದಿನಗಳ ಭಜನಾ ಕಾರ್ಯಕ್ರಮಕ್ಕೆ ಶ್ರೀ ಗೋಪಾಲಕೃಷ್ಣ ಮಹಿಳಾ ಭಜನಾ ಮಂಡಳಿ ಎಡನೀರು ಇವರಿಂದ ಭಜನೆಗೆ ಚಾಲನೆ, 11ರಿಂದ ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಮತ್ತು ಬಳಗದವರಿಂದ ಭಕ್ತಿ ಸಂಗೀತ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, 2.30ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದ್ದು, ಶ್ರೀಮದ್ವಾಚಾರ್ಯ ಮೂಲ ಸಂಸ್ಥಾನಮ್ ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರತೀರ್ಥ ಸ್ವಾಮೀಜಿ ಆಶೀರ್ವಚನ ನೀಡುವರು. ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಮೋಹನ ಆಳ್ವ ಉದ್ಘಾಟಿಸುವರು. ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಅಧ್ಯಕ್ಷತೆ ವಹಿಸುವರು.
ಈ ವೇಳೆ ಎಡನೀರು ಮಠದ ಯೂಟ್ಯೂಬ್ ಚಾನೆಲ್ `ಆನಂದ ಭಾರತಿ’ಯ ಲೋಕಾರ್ಪಣೆ ನಡೆ ಯಲಿದೆ. ಉದ್ಯಮಿ ಇ.ಮಹಾಬಲೇಶ್ವರ ಭಟ್ ಚಾನೆಲ್ ಲೋಕಾರ್ಪಣೆ ಗೊಳಿಸುವರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ.ಸೀತಾರಾಮ ತೋಳ್ಪಡಿತ್ತಾಯ ಶುಭಾಶಂಸನೆಗೈಯುವರು.
ಸಾAಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅಪರಾಹ್ನ 4.30ರಿಂದ ವೇಣು ನಿನಾದ ಕಾರ್ಯಕ್ರಮ ಜರಗಲಿದೆ. ವಿದ್ವಾನ್ ಶಶಾಂಕ ಸುಬ್ರಹ್ಮಣ್ಯಂ ಚೆನೈ ಕೊಳಲಿನಲ್ಲಿ, ವಯಲಿನ್ನಲ್ಲಿ ವಿಠಲ ರಾಮಮೂರ್ತಿ ಚೆನೈ, ಮೃದಂಗದಲ್ಲಿ ವಿದ್ವಾನ್ ಪತ್ರಿ ಸತೀಶ್ ಕುಮಾರ್ ಚೆನೈ ಸಹಕರಿಸುವರು.