ಹೊಳೆಯಲ್ಲಿ ಕಾಡಾನೆ ಮರಿಯ ಮೃತದೇಹ ಪತ್ತೆ
ಕಾಸರಗೋಡು: ಕಾರ್ಯಂ ಗೋಡು ಹೊಳೆಯಲ್ಲಿ ಕಾಡಾನೆ ಮರಿಯ ಮೃತದೇಹ ಪತ್ತೆಯಾಗಿದೆ. ನಿನ್ನೆ ಸಂಜೆ 5ಗಂಟೆ ವೇಳೆ ಚೆರುಪುಳ ಮೀನ್ ತುಳ್ಳಿ ಎಂಬಲ್ಲಿಗೆ ಸಮೀಪ ಹೊಳೆಯಲ್ಲಿ ಕಾಡಾನೆ ಮರಿಯ ಮೃತದೇಹ ನೀರಿನಲ್ಲಿ ತೇಲಿ ಬಂದಿದೆ. ಇದನ್ನು ಕಂಡ ನಾಗರಿಕರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರು. ಇತ್ತೀಚೆಗಿನಿಂದ ಕರ್ನಾಟಕ ವನಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಈ ವೇಳೆ ಹೊಳೆಗಿಳಿದ ಕಾಡಾನೆ ಮರಿ ಆಯತಪ್ಪಿ ನೀರಿನ ಪ್ರವಾಹದಲ್ಲಿ ಕೊಚ್ಚಿ ಬಂದಿರುವುದಾಗಿ ಅಂದಾಜಿಸಲಾಗಿದೆ.