ಸಿರಿಬಾಗಿಲು ಸಾಂಸ್ಕೃತಿಕ ಭವನದಲ್ಲಿ ಯಕ್ಷಗಾನ ಪ್ರಸಂಗ ರಚನೆ ಕಮ್ಮಟ
ಮಾಯಿಪ್ಪಾಡಿ: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಭವನದಲ್ಲಿ ಯಕ್ಷಗಾನ ಪ್ರಸಂಗ ರಚನೆ ಕಮ್ಮಟ ಜರಗಿತು. ಯಕ್ಷಕವಿ ಶಿರೂರು ಪಣಿಯಪ್ಪಯ್ಯರ 108ನೇ ಜನ್ಮದಿನದ ಸ್ಮರಣಾರ್ಥ ಕಾರ್ಯಕ್ರಮ ಆಯೋಜಿಸ ಲಾಗಿತ್ತು. ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಉದ್ಘಾಟಿಸಿದರು. ಗಡಿನಾಡು ಯಕ್ಷಗಾನ ಕವಿ ಶೇಡಿಗುಮ್ಮೆ ವಾಸುದೇವ ಭಟ್ರಿಗೆ ಫಣಿಗಿರಿ ಪ್ರತಿಷ್ಠಾನ ಶಿರೂರು ಇವರು ಫಣಿಗಿರಿ ಪ್ರಶಸ್ತಿ ನೀಡಿ ಗೌರವಿಸಿದರು. ಪ್ರತಿಷ್ಠಾನದ ಅಧ್ಯಕ್ಷ ಉಮೇಶ ಶಿರೂರು ಉಪಸ್ಥಿತರಿದ್ದರು.
ಹಳೆಯ ಯಕ್ಷಗಾನ ಧ್ವನಿ ಸುರುಳಿಗಳ ಸಂರಕ್ಷಕ ಎಂ.ಎಲ್. ಭಟ್ ಮರವಂತೆ ಇವರನ್ನು ಸಿರಿಬಾಗಿಲು ಪ್ರತಿಷ್ಠಾನದ ವತಿಯಿಂದ ಗೌರವಿಸ ಲಾಯಿತು. ಡಾ. ಶಂಕರನಾರಾಯಣ ಭಟ್ ಉಪ್ಪಂಗಳ ಪ್ರತಿಷ್ಠಾನಕ್ಕೆ ಲಕ್ಷ ರೂಪಾಯಿ ದತ್ತಿನಿಧಿ ನೀಡಿದರು. ಯಕ್ಷಗಾನ ಅಕಾಡೆಮಿ ಸದಸ್ಯ ಸತೀಶ ಅಡಪ ಸಂಕಬೈಲು, ಶ್ರೀಧರ ಡಿ.ಎಸ್. ಕಿನ್ನಿಗೋಳಿ, ಡಾ. ವಸಂತ ಭಾರದ್ವಾಜ್ ಕಬ್ಬಿನಾಲೆ, ರಾಜಗೋಪಾಲ್ ಕನ್ಯಾನ ಉಪಸ್ಥಿತರಿದ್ದರು. ಸಿರಿಬಾಗಿಲು ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣಯ್ಯ ಸ್ವಾಗತಿಸಿದರು. ಜಗದೀಶ್ ಕೂಡ್ಲು ನಿರೂಪಿಸಿದರು. ಕೃಷ್ಣ ಕಾರಂತ ದೇಶಮಂಗಲ ವಂದಿಸಿದರು. ಬಳಿಕ ಕಬ್ಬಿನಾಲೆ ವಸಂತ ಭಾರದ್ವಾಜ್, ಶ್ರೀಧರ ಡಿ.ಎಸ್. ವಿವಿಧ ವಿಷಯಗಳಲ್ಲಿ ಕಮ್ಮಟ ನಡೆಸಿಕೊಟ್ಟರು.