ಆರೋಗ್ಯ ವಲಯ ಐಸಿಯುವಿನಲ್ಲಿದೆ- ಕಾಂಗ್ರೆಸ್ ಆರೋಪ

ಮಂಜೇಶ್ವರ: ಕೇರಳದ ಎಡರಂಗ ಸರಕಾರದ ಆಡಳಿತದಿಂದ ಆರೋಗ್ಯ ಇಲಾಖೆಯು ಐಸಿಯುವಿನಲ್ಲಿ ಚಡಪಡಿಸುತ್ತಿದೆ. ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರುಗಳಿಲ್ಲ, ವೈದ್ಯರಿದ್ದರೆ ಸಹಾಯಕ ಸಿಬ್ಬಂದಿಗಳಿಲ್ಲ, ಎಲ್ಲವೂ ಇದ್ದರೆ ಔಷಧಿಯಿಲ್ಲ. ಶಸ್ತ್ರ ಚಿಕಿತ್ಸೆಗೆ ಅಗತ್ಯವಾದ ಉಪಕರಣಗಳಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಜೆ.ಎಸ್ ಆರೋಪಿಸಿದ್ದಾರೆ. 
ಇವೆಲ್ಲಾ ಕೊರತೆಗಳ ನಡುವೆಯೂ ಎಡರಂಗ ಸರಕಾರ ಆರೋಗ್ಯ ವಲಯದಲ್ಲಿ ಕೇರಳ ನಂಬರ್ ವನ್ ಎಂದು ಎಗ್ಗಿಲ್ಲದೆ ಹೇಳಿ ನಡೆಯುತ್ತಿದೆ. ಆದರೆ ಮುಖ್ಯಮಂತ್ರಿಗಳೂ ಸೇರಿದಂತೆ ಸಚಿವ ಸಂಪುಟದ ಸದಸ್ಯರು ಈ ನಂಬರ್‌ವನ್‌ನಲ್ಲಿ ನಂಬಿಕೆ ಕಳೆದುಕೊಂಡು ವಿದೇಶಗಳಲ್ಲಿ ಮತ್ತು ಹೊರರಾಜ್ಯಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ದಶಕಗಳ ಹಿಂದೆ ಉಪಯೋಗಶೂನ್ಯ ಎಂದು ಘೋಷಿಸಲ್ಪಟ್ಟ ಕೋಟ್ಟಯಂ ಮೆಡಿಕಲ್ ಕಾಲೇಜಿನ ಹಳೆಯ ಬ್ಲಾಕ್ ಕುಸಿದು ಬಿಂದು ಎಂಬ ಗೃಹಿಣಿ ಮೃತಪಟ್ಟಿದ್ದು, ಆರೋಗ್ಯ ಸಚಿವೆ ವೀಣಾ ಜಾರ್ಜ್ ಈ ದುರ್ಘಟನೆಗೆ ನೇರ ಕಾರಣಕರ್ತರಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಸಚಿವೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಮಂಜೇಶ್ವರ ಮತ್ತು ಕುಂಬಳೆ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಜಂಟಿ ಆಶ್ರಯದಲ್ಲಿ ನಾಳೆ ಮಂಗಲ್ಪಾಡಿ ತಾಲೂಕು ಆಸ್ಪತ್ರೆ ಮುಂಭಾಗದಲ್ಲಿ ನಡೆಯುವ ಧರಣಿ ಕಾರ್ಯಕ್ರಮ ಯಶಸ್ವಿಗೊಳಿಸಲು ಕಾಂಗ್ರೆಸ್‌ನ ಎಲ್ಲಾ ನಾಯಕರು ಶ್ರಮಿಸಬೇಕೆಂದು ಅವರು ಕರೆ ನೀಡಿದರು. ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಸಭೆ ಉದ್ಘಾಟಿಸಿ ಮಾತನಾಡುತ್ತಿದ್ದರು. 
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಡಿಎಂಕೆ ಅಧ್ಯಕ್ಷತೆ ವಹಿಸಿದ್ದರು. ನೇತಾರರಾದ ಉನೈಸ್ ಬೇಡಗಂ, ಉಮ್ಮರ್ ಬೋರ್ಕಳ, ಶಾಹುಲ್ ಹಮೀದ್, ಅಭಿಲಾಷ್ ಕೆ,ಚಂದ್ರಶೇಖರ ಶೆಟ್ಟಿ ಬೆಜ್ಜ, ಸತೀಶ್ ಅಡಪ್ಪ ಸಂಕಬೈಲ್, ಸತ್ಯನ್ ಉಪ್ಪಳ, ಮನ್ಸೂರ್ ಬಿ.ಎಂ, ಫ್ರಾನ್ಸಿಸ್ ಡಿ ಸೋಜಾ, ನಾಗೇಶ್ ಮಂಜೇಶ್ವರ, ಫಾರೂಕ್ ಶಿರಿಯ, ಹನೀಫ್, ಬಾಬು ಬಂದ್ಯೋಡು, ಪುರುಷೋತ್ತಮ ಅರಿಬೈಲ್, ಗಣೇಶ್ ಪಾವೂರು, ಬರ್ನಾರ್ಡ್ ಡಿ ಅಲ್ಮೇಡಾ, ಅಜೀಜ್ ಕಲ್ಲೂರು, ಮೊಹಮ್ಮದ್ ಜೆ, ವಸಂತರಾಜ್ ಶೆಟ್ಟಿ, ಹುಸೈನ್ ಕುಬಣೂರ್, ಗೀತಾ ಬಂದ್ಯೋಡು,ಸೀತಾ ಡಿ, ರಂಜಿತ್ ಮಂಜೇಶ್ವರ, ಗಂಗಾಧರ ಪಡ್ಪಿನಕೆರೆ, ಪಿ ಎಂ ಖಾದರ್ ಹಾಜಿ, ನವೀನ್ ಕುಮಾರ್, ಉಮ್ಮರ್ ಬೆಜ್ಜ, ಬಾಸಿತ್ ತಲೆಕ್ಕಿ, ಸದಾಶಿವ ಕೆ, ಹಮೀದ್ ಕಣಿಯೂರು, ಮೊಹಮ್ಮದ್ ಎಸ್ ಎಂ, ಎ ಎಂ ಉಮ್ಮರ್ ಕುಂಕುAಞÂ , ಅಬ್ದುಲ್ ರಹಿಮಾನ್ ಹಾಜಿ, ಮಕ್ಬೂಲ್ ಅಹ್ಮದ್ ಉಪಸ್ಥಿ ತರಿದ್ದರು. ಜವಹರ್ ಬಾಲ ಮಂಚ್ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ  ಅಭಿಲಾಷ್ ಹಾಗೂ ಸಂಸ್ಕಾರ ಸಾಹಿತಿ ಮಂಡಲ ಕನ್ವೀನರ್ ಹುಸೈನ್ ಕುಬಣೂರುರನ್ನು ಗೌರವಿಸಲಾಯಿತು.  ದಿವಾಕರ್ ಎಸ್ ಜೆ ಸ್ವಾಗತಿಸಿ, ಮುಹಮ್ಮದ್ ಸೀಗಂಡಡಿ ವಂದಿಸಿದರು.

Leave a Reply

Your email address will not be published. Required fields are marked *

You cannot copy content of this page