ಸಂತೋಷ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ವಾರ್ಷಿಕ ಮಹಾಸಭೆ, ಪದಾಧಿಕಾರಿಗಳ ಆಯ್ಕೆ
ಸೀತಾಂಗೋಳಿ: ಸಂತೋಷ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಸೀತಾಂಗೋಳಿ ಇದರ ವಾರ್ಷಿಕ ಮಹಾಸಭೆ ಕ್ಲಬ್ ಕಚೇರಿಯಲ್ಲಿ ಜರಗಿತು. ಅಧ್ಯಕ್ಷ ಕೆ. ಮಹಾಲಿಂಗ ಅಧ್ಯಕ್ಷತೆ ವಹಿಸಿದರು. ಪ್ರಧಾನ ಕಾರ್ಯದರ್ಶಿ ಸತೀಶ್ ಕುಮಾರ್ ವಾರ್ಷಿಕ ವರದಿ, ಕೋಶಾಧಿಕಾರಿ ಪ್ರಸಾದ್ ಲೆಕ್ಕ ಪತ್ರ ಮಂಡಿಸಿದರು. ಗಣೇಶ್ ಪ್ರಾರ್ಥನೆ ಹಾಡಿದರು. ನೂತನ ಕಾರ್ಯಕಾರಿ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ನ್ಯಾಯವಾದಿ ಥೋಮಸ್ ಡಿಸೋಜಾ, ಉಪಾಧ್ಯಕ್ಷರಾಗಿ ಅಪ್ಪಣ್ಣ ಪಾಟಾಳಿ, ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್‌ರಾಜ್, ಕ್ರೀಡಾ ಕಾರ್ಯದರ್ಶಿಯಾಗಿ ಅಭಿಜಿತ್, ಕಲಾ ಕಾರ್ಯದರ್ಶಿಯಾಗಿ ಶೋಭಿತ್, ಜೊತೆ ಕಾರ್ಯದರ್ಶಿ ಯಾಗಿ ಮೋಹನ, ಕೋಶಾಧಿಕಾರಿ ಯಾಗಿ ರಂಜಿತ್ ಆಯ್ಕೆಯಾದರು. ನಿರಂಜನ, ಮಹಾಲಿಂಗ ಕೆ, ಎಸ್.ಬಿ. ನಾರಾಯಣ, ಜಯಂತ ಪಾಟಾಳಿ, ರವಿ ಜೆ.ಬಿ, ತಿಮೋತಿ ಕ್ರಾಸ್ತಾ, ರಾಜೇಶ್, ಪೃಥ್ವಿರಾಜ್, ಉದಯ ಸದಸ್ಯರಾಗಿ, ಮಾಧ್ಯಮ ಹಾಗೂ ಪ್ರಚಾರ ಸಮಿತಿಗೆ ಅಪ್ಪಣ್ಣ, ಸುಧೀಶ್ ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿ ಸತೀಶ್ ವಂದಿಸಿದರು.