ಬಿದ್ದು ಸಿಕ್ಕಿದ ಚಿನ್ನಾಭರಣ ವಾರಸುದಾರರಿಗೆ ಹಸ್ತಾಂತರ: ಯುವಕರಿಗೆ ಅಭಿನಂದನೆ

ಬದಿಯಡ್ಕ: ಬಿದ್ದು ಸಿಕ್ಕಿದ ಒಂದೂವರೆ ಪವನ್ ಚಿನ್ನಾಭರಣವನ್ನು ಪೊಲೀಸ್ ಠಾಣೆಗೆ ತಲುಪಿಸಿ ಪ್ರಾಮಾಣಿಕತೆ ಮೆರೆದ ಯುವಕರನ್ನು ಪೊಲೀಸರು ಹಾಗೂ ನಾಗರಿಕರು ಅಭಿನಂದಿಸಿದ್ದಾರೆ.

ಬದಿಯಡ್ಕದಲ್ಲಿ  ಹಣಕಾಸು ಸಂಸ್ಥೆ ನಡೆಸುವ ಬೋಳುಕಟ್ಟೆಯ ಜಗನ್ನಾಥ ರೈ,  ನೀರ್ಚಾಲ್‌ನ ನವೀನ್ ಎಂಬಿವರು  ಪ್ರಾಮಾಣಿಕತೆ ಮೆರೆದಿದ್ದಾರೆ. ಪೇಟೆಯ ಶಾಪಿಂಗ್ ಕಾಂಪ್ಲೆಕ್ಸ್‌ವೊಂದರ ಸಮೀಪ ಇವರಿಗೆ ಚಿನ್ನಾಭರಣ ಬಿದ್ದು ಸಿಕ್ಕಿತ್ತು. ಕೂಡಲೇ ಅವರು ಅದನ್ನು ಬದಿಯಡ್ಕ ಪೊಲೀಸ್ ಠಾಣೆಗೆ ತಲುಪಿಸಿದ್ದಾರೆ. ಪೊಲೀಸರ ಸಲಹೆಯಂತೆ ಸಾಮಾಜಿಕ ಕಾರ್ಯಕರ್ತನಾದ ಹಾರಿಸ್ ಬಿಡಿಕೆ  ನೇತೃತ್ವದಲ್ಲಿ ಈ ಮಾಹಿತಿ ಯನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಲಾಯಿತು. ವಿಷಯ ತಿಳಿದು ಮೂಕಂಪಾರೆಯ ಹಸನ್ ಶೇಕ್‌ರ ಪತ್ನಿ ರಫೀನ ಪೊಲೀಸ್ ಠಾಣೆಗೆ ತಲುಪಿ ಪುರಾವೆ ನೀಡಿದ ಆಧಾರದಲ್ಲಿ ಎಸ್‌ಐ ಸುಮೇಶ್ ಬಾಬು   ಚಿನ್ನವನ್ನು ಅವರಿಗೆ ಹಸ್ತಾಂತರಿಸಿದರು.   ಜಗನ್ನಾಥ ರೈ ಹಾಗೂ ನವೀನರನ್ನು    ಎಸ್‌ಐ ಸುಮೇಶ್‌ಬಾಬು, ಪ್ರಸಾದ್, ಅಭಿಲಾಷ್ ಮೊದಲಾದವರು ಅಭಿನಂದಿಸಿದರು.

Leave a Reply

Your email address will not be published. Required fields are marked *

You cannot copy content of this page