ದೈವ ಪಾತ್ರಿ ನಿಧನ
ವರ್ಕಾಡಿ: ಬೋರ್ಕಳ ಬಳಿಯ ಲೆಂಕ್ರಿಕ್ಕಾಡ್ ನಿವಾಸಿ ಲೆಂಕ್ರಿಕ್ಕಾಡು ಮಲರಾಯ ದೈವದ ಪಾತ್ರಿ ಪದ್ಮನಾಭ (48) ಅಸೌಖ್ಯದಿಂದ ನಿಧನ ಹೊಂದಿ ದರು. ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಮೇಸ್ತ್ರಿ ಕೆಲಸ ಮಾಡುತ್ತಿದ್ದರು. ನಿನ್ನೆ ಮಧ್ಯಾಹ್ನ ನಿಧನ ಸಂಭವಿಸಿದೆ. ಮೃತರು ಪತ್ನಿ ಶಶಿಕಲಾ, ಮಕ್ಕಳಾದ ಲೋಹಿತ್, ಯಶ್ವಿನಿ, ಅಳಿಯ ಯತೀಶ್, ಸಹೋದರ ಆನಂದ, ಸಹೋದರಿ ಜಯಂತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ನಿಧನಕ್ಕೆ ಲೆಂಕ್ರಿಕ್ಕಾಡ್ ಮಲರಾಯ ಕಲ್ಲುರ್ಟಿ ದೈವಸ್ಥಾನ ಸಮಿತಿ, ಬೋರ್ಕಳ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ನಾಗಬ್ರಹ್ಮ ಸ್ವ-ಸಹಾಯ ಸಂಘ ಸಂತಾಪ ಸೂಚಿಸಿದೆ. ಮನೆಗೆ ಹಲವರು ತೆರಳಿ ಅಂತಿಮ ನಮನ ಸಲ್ಲಿಸಿದರು.