ಶ್ರೀಮಂತ ಕುಳಗಳ ಸೇವೆಯಲ್ಲಿ ನಿರತವಾದ ಎಡರಂಗ ಸರಕಾರ- ಕಾಂಗ್ರೆಸ್ ಆರೋಪ
ಉಪ್ಪಳ: ರಾಜ್ಯದ ಎಡರಂಗ ಸರಕಾರ ಬಡ ಜನರ ಹಿತಾಸಕ್ತಿ ಕಾಯುವ ತನ್ನ ನಿಲುವಿನಿಂದ ಹಿಂದೆ ಸರಿದು ಅದಾನಿ, ಸಾಂಟಿಯಾಗೊ ಮಾರ್ಟಿನ್ ಮುಂತಾದ ಬಹುಕೋಟಿ ಶ್ರೀಮಂತ ಕುಳಗಳ ಸೇವೆಯಲ್ಲಿ ನಿರತವಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಆರೋಗ್ಯವಲಯದಲ್ಲಿ ಸರಕಾರ ತೋರುವ ಕಡೆಗಣನೆ, ನಿರ್ಲಕ್ಷ್ಯ ಪ್ರತಿಭಟಿಸಿ ಮಂಜೇಶ್ವರ ಹಾಗೂ ಕುಂಬಳೆ ಬ್ಲೋಕ್ ಕಾಂಗ್ರೆಸ್ ಸಮಿತಿಗಳ ಆಶ್ರಯದಲ್ಲಿ ಮಂಜೇಶ್ವರ ತಾಲೂಕು ಆಸ್ಪತ್ರೆ ಮುಂಭಾಗ ನಡೆಸಿದ ಪ್ರತಿಭಟನಾ ಧರಣಿ ಉದ್ಘಾಟಿಸಿ ರಮೇಶನ್ ಕರ್ವಾಚ್ಚೇರಿ ನುಡಿದರು. ಆಡಳಿತದ ಸಕಲ ವಲಯದಲ್ಲೂ ಸಂಪೂರ್ಣ ವಿಫಲವಾದ ಎಡರಂಗ ಸರಕಾರ ಪೊಳ್ಳು ಭರವಸೆ, ಅತಿರಂಜಿತ ಪ್ರಚಾರಗಳನ್ನು ನಡೆಸಿ ಕಾಲ ಕಳೆಯುತ್ತಿದೆ.
ತೆರಿಗೆ ಭಯೋತ್ಪಾದನೆ, ದಂಡ ವಸೂಲಿ ಮಾತ್ರ ನಿರಂತರ ನಡೆಯುತ್ತಿದೆ ಎಂದು ಅವರು ಆರೋಪಿಸಿದರು. ಮಂಜೇಶ್ವರ ಬ್ಲೋಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಡಿಎಂಕೆ ಅಧ್ಯಕ್ಷತೆ ವಹಿಸಿದರು. ಸೋಮಶೇಖರ ಜೆ.ಎಸ್, ಮಂಜುನಾಥ ಆಳ್ವ, ಲಕ್ಷ್ಮಣ ಪ್ರಭು, ಉಮ್ಮರ್ ಬೋರ್ಕಳ, ಬಾಬು ಬಂದ್ಯೋಡು, ದಾಮೋದರ, ಹನೀಫ್ ಪಡಿಞಾರ್, ಪುರುಷೋತ್ತಮ ಅರಿಬೈಲು, ರವಿ ಪೂಜಾರಿ, ಸುಲೈಮಾನ್, ಬಿ.ಎಸ್. ಗಾಂಭೀರ್, ವಸಂತ, ಜುನೈದ್ ಉರ್ಮಿ, ಸತ್ಯನ್ ಸಿ. ಉಪ್ಪಳ, ಹರ್ಷಾದ್ ವರ್ಕಾಡಿ, ಚಂದ್ರಶೇಖರ ಶೆಟ್ಟಿ ಬೆಜ್ಜ, ಓಂಕೃಷ್ಣ, ಫಾರೂಕ್ ಶಿರಿಯ, ನಾಗೇಶ್ ಮಂಜೇಶ್ವರ, ಗಣೇಶ್ ಪಾವೂರು, ನವೀನ್ ರೈ, ಬರ್ನಾಡ್ ಡಿ ಅಲ್ಮೇಡ, ಮೊಹಮ್ಮದ್ ಸೀಗಂದಡಿ, ರವೀಂದ್ರ ಶೇಣಿ, ಹನೀಫ್, ಯೋಗೀಶ್, ರಂಜಿತ್, ಗೀತ, ರಾಜೇಶ್ ನಾಯ್ಕ್, ಆಮು ಅಡ್ಕಸ್ಥಳ, ಪೃಥ್ವಿರಾಜ್ ಶೆಟ್ಟಿ, ಸುಂದರ ಆರಿಕ್ಕಾಡಿ, ದಿವಾಕರ ಎಸ್.ಜೆ. ಭಾಗವಹಿಸಿದರು.