ಎಸ್‌ಎಸ್‌ಎಫ್ ಕುಂಬಳೆ, ಮಂಜೇಶ್ವರ ಡಿವಿಷನ್ ಸಾಹಿತ್ಯೋತ್ಸವಕ್ಕೆ ನಾಳೆ ಚಾಲನೆ
ಕುಂಬಳೆ: ಎಸ್‌ಎಸ್‌ಎಫ್ 32ನೇ ಕುಂಬಳೆ ಡಿವಿಷನ್ ಸಾಹಿತ್ಯೋತ್ಸವ ನಾಳೆ ಕಳತ್ತೂರು ತಾಜುಲ್ ಉಲಮಾ ಎಜ್ಯುಕೇಶನ್ ಸೆಂಟರ್‌ನಲ್ಲಿ ಆರಂಭ ಗೊಳ್ಳಲಿದೆ. ಡಿವಿಷನ್‌ನ ವಿವಿಧ ಸಾಹಿತ್ಯೋತ್ಸವಗಳಲ್ಲಿ ಸ್ಪರ್ಧಿಸಿ ಅರ್ಹತೆ ಗಳಿಸಿದ ವಿದ್ಯಾರ್ಥಿಗಳ ಕಲಾ ಸಾಹಿತ್ಯ ಸ್ಪರ್ಧೆ ಸಹಿತ ಸಾಂಸ್ಕೃತಿಕ, ಆತ್ಮೀಯ ಸಂಗಮಗಳು ನಡೆಯಲಿದೆ. ಇಂದು ಮಧ್ಯಾಹ್ನ ಸಿಯಾರತ್ ಸಂಗಮಗಳು, ಸಂಜೆ ಧ್ವಜಾರೋಹಣ ನಡೆಯಲಿದೆ. ನಾಳೆ ಸಂಜೆ ನಡೆಯುವ ಉದ್ಘಾಟನಾ ಸಂಗಮವನ್ನು ರಾಜ್ಯ ಅಧ್ಯಾಪಕ ಪ್ರಶಸ್ತಿ ವಿಜೇತ ನಿರ್ಮಲ್ ಕುಮಾರ್ ಉದ್ಘಾಟಿಸುವರು.
ಶಾಸಕ ಎಕೆಎಂ ಅಶ್ರಫ್ ಭಾಗವಹಿಸುವರು. ಆದಿತ್ಯವಾರ ಸಂಜೆ ಸಮಾರೋಪ ಸಂಗಮ ಜರಗಲಿದೆ. ಈ ಬಗ್ಗೆ ಕುಂಬಳೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಪದಾಧಿಕಾರಿಗಳಾದ ಹನೀಫ್, ನಸೀರ್ ಹಿಮಾಮಿ ಬಾಕವಿ, ರಿಫಾಯಿ ಹಿಶಮಿ, ಯೂನುಸ್ ಸುರೈಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಂಜೇಶ್ವರ: ಮಂಜೇಶ್ವರ ಡಿವಿಷನ್ ಸಾಹಿತ್ಯೋತ್ಸವ ಮೀಂಜ ಬಾಳಿಯೂರು ಅಸಾಸುದ್ದೀನ್‌ನಲ್ಲಿ ನಡೆಯಲಿದೆ ಎಂದು ಪದಾಧಿಕಾರಿಗಳು ಸುದ್ಧಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇಂದು ರಾತ್ರಿ 7 ಗಂಟೆಗೆ ಮಜ್ಲಿಸ್ ನಡೆಯಲಿದ್ದು, ಮಶೂದ್ ತಂಙಳ್ ನೇತೃತ್ವ ನೀಡುವರು. ನಾಳೆ ಬೆಳಿಗ್ಗೆಯಿಂದ ವಿವಿಧ ಸ್ಪರ್ಧೆಗಳು ನಡೆಯಲಿದೆ. ಸಂಜೆ ೬ಕ್ಕೆ ಉದ್ಘಾಟನೆ ಜರಗಲಿದ್ದು, ನೌಶಾದ್ ಸಖಾಫಿ ಅಧ್ಯಕ್ಷತೆ ವಹಿಸುವರು. ಸುಂದರ ಬಾರಡ್ಕ ಉದ್ಘಾಟಿಸುವರು. ಅಶ್ರಫ್ ಸಖಾಫಿ ಪ್ರವಚನ ನೀಡುವರು. ಹಲವರು ಭಾಗವಹಿಸುವರು.