೨೫೦ ಗ್ರಾಂ ಗಾಂಜಾ ವಶ: ಬೈಕ್ ಸಹಿತ ಆರೋಪಿ ಸೆರೆ

ಕಾಸರಗೋಡು: ಚೆಂಗಳ ಇಂದಿರಾನಗರದಲ್ಲಿ ಕಾಸರಗೋಡು ರೇಂಜ್ ಅಬಕಾರಿ ಇನ್‌ಸ್ಪೆಕ್ಟರ್ ಅನು ಕುಮಾರ್ ನೇತೃತ್ವದ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ೨೫೦ ಗ್ರಾಂ  ಗಾಂಜಾ ಪತ್ತೆಹಚ್ಚಿ ವಶಪಡಿಸಲಾಗಿದೆ.

ಈ ಸಂಬಂಧ ಚೆಂಗಳ ರಹಮ್ಮತ್ ನಗರದ ಕೆ.ಎಂ.ಹೌಸ್‌ನ ನೌಶಾದ್ ಎಚ್ (೪೧) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಆತ ಸಂಚರಿಸುತ್ತಿದ್ದ ಬೈಕ್‌ನ್ನು ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡಿದೆ. ಬಳಿಕ ಆರೋಪಿಗೆ ಜಾಮೀನು ಮಂಜೂರು ಮಾಡಲಾಗಿದೆ.

You cannot copy contents of this page