ಡ್ರೈವಿಂಗ್ ಕಲಿಯಲು ಹೋದ ಯುವತಿ ನಾಪತ್ತೆ

ಬದಿಯಡ್ಕ: ಡ್ರೈವಿಂಗ್ ಕಲಿಯಲೆಂದು ತಿಳಿಸಿ ಮನೆಯಿಂದ ಹೋದ ಯುವತಿ ನಾಪತ್ತೆಯಾಗಿರು ವುದಾಗಿ ದೂರಲಾಗಿದೆ. ಕುಂಬ್ಡಾಜೆ ಗೋಸಾಡ ಪಾತ್ತಿಮೂಲ ನಿವಾಸಿ ಸಿ.ಎಚ್. ಅಬೂಬಕರ್‌ರ ಪುತ್ರಿ ಫಾತಿಮತ್ ಸಾನಿಯ (೧೮) ನಾಪತ್ತೆಯಾದ ಯುವತಿ.

ಬದಿಯಡ್ಕದ ಖಾಸಗಿ ಡ್ರೈವಿಂಗ್ ಸ್ಕೂಲ್‌ನಲ್ಲಿ ಡ್ರೈವಿಂಗ್ ಕಲಿಯುತ್ತಿದ್ದ ಈಕೆ ನ. ೧ರಂದು ಬೆಳಿಗ್ಗೆ ಹೋಗಿದ್ದಾಳೆ. ಆದರೆ ಅನಂತರ ಮರಳಿ ಬಂದಿಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆ ಬಗ್ಗೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

You cannot copy contents of this page