ಸಿಪಿಎಂ ರೂಪೀಕರಿಸಿದ ಮುಖಂಡರಲ್ಲಿ ಓರ್ವರಾದ ಶಂಕರಯ್ಯ ನಿಧನ
ಚೆನ್ನೈ: ಸಿಪಿಎಂ ರೂಪೀಕರಿಸಿದ ಹಿರಿಯ ಮುಖಂಡರಲ್ಲಿ ಓರ್ವರಾದ ಎನ್. ಶಂಕರಯ್ಯ (೧೦೨) ನಿಧನ ಹೊಂದಿದರು. ಅಸೌಖ್ಯ ತಗಲಿ ಚೆನ್ನೈಯ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು.
೧೯೬೪ ಎಪ್ರಿಲ್ ೧೧ರಂದು ಸಿಪಿಐ ರಾಷ್ಟ್ರೀಯ ಕೌನ್ಸಿಲ್‌ನಿಂದ ವಿ.ಎಸ್. ಅಚ್ಯುತಾನಂದ್‌ರ ಜೊತೆಗೆ ಹೊರ ಬಂದ ಇವರು ಸಿಪಿಎಂಗೆ ರೂಪು ನೀಡಿದವರಲ್ಲಿ ಓರ್ವರಾಗಿದ್ದಾರೆ. ೧೯೬೭, ೧೯೭೭, ೧೯೮೦ರಲ್ಲಿ ಸಿಪಿಎಂನ ಸದಸ್ಯರಾಗಿ ತಮಿಳುನಾಡು ವಿಧಾನಸಭೆಗೆ ತಲುಪಿದ್ದಾರೆ. ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ ಕಾರಣ ಶಿಕ್ಷಣ ಪೂರ್ತಿಗೊಳಿಸಲು ಬ್ರಿಟೀಷ್ ಸರಕಾರ ಅನುಮತಿ ನೀಡದೆ ಅವರನ್ನು ಕಾರಾಗೃಹದಲ್ಲಿರಿಸಿತ್ತು. ೮ ವರ್ಷ ಜೈಲಿನಲ್ಲಿದ್ದ ಇವರು ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ಹಿಂದಿನ ದಿನ ಜೈಲಿನಿಂದ ಬಿಡುಗಡೆಗೊಂಡಿದ್ದರು.