ಕೇರಳ ನಕ್ಸಲರ ಪ್ರಧಾನ ಕೇಂದ್ರವಾಗುತ್ತಿದೆ: ಗುಪ್ತಚರ ಮುನ್ನೆಚ್ಚರಿಕೆ

ಕಾಸರಗೋಡು: ಕೇರಳ ಮಾವೋ ವಾದಿಗಳ(ನಕ್ಸಲ್) ಪ್ರಧಾನ ಕೇಂದ್ರ ವಾಗಿ ಬದಲಾಗತೊಡಗಿದೆ ಎಂದು ಕೇಂದ್ರ ಗುಪ್ತಚರ ವಿಭಾಗ ಕೇಂದ್ರ ಸರಕಾ ರಕ್ಕೆ ವರದಿ ಸಲ್ಲಿಸಿದೆ. ೨೦೨೨ ದಶಂಬರ್ ೧೮ರಂದು ಸಲ್ಲಿಸಲಾದ ವರದಿಯಲ್ಲಿ ಈ ಮುನ್ನೆಚ್ಚರಿಕೆ ನೀಡಲಾಗಿದೆ.

ಕೇರಳ ಮಾತ್ರವಲ್ಲ, ನೆರೆ ರಾಜ್ಯಗಳಾದ ಕರ್ನಾಟಕ ಮತ್ತು ತಮಿಳುನಾಡಿಗೂ ಈ ಮುನ್ನೆಚ್ಚರಿಗೆ ನೀಡಲಾಗಿದೆ. ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಾಗಿದೆ.  ದಕ್ಷಿಣ ಭಾರತದ ಈ ಮೂರು ರಾಜ್ಯಗಳು ಮಾತ್ರವಲ್ಲ ತೆಲಂಗಾನ ಮತ್ತು ಛತ್ತೀಸ್‌ಗಢದಲ್ಲೂ ಕೇಂದ್ರಪಡೆ ಗಳ ಕಟ್ಟುನಿಟ್ಟಿನ ಕ್ರಮ ಜರಗಿಸಬೇಕಾದ ಅಗತ್ಯವಿದೆ. ನಕ್ಸಲರು ತಮ್ಮ ನೂತನ ಕೇಂದ್ರಗಳನ್ನಾಗಿ ಕೇರಳ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಅರಣ್ಯ ಪ್ರದೇಶಗಳನ್ನು ಈಗ ಬಳಸಿಕೊಳ್ಳ ತೊಡಗಿದ್ದಾರೆ. ವಯನಾಡು, ಮಲ ಪ್ಪುರಂ, ಪಾಲ್ಘಾಟ್ ಮಾತ್ರವಲ್ಲದೆ ಕಣ್ಣೂರು ಜಿಲ್ಲೆಯಲ್ಲಿ ಕರ್ನಾಟಕ ಗಡಿ ಪ್ರದೇಶಗಳ ಅರಣ್ಯಗಳಲ್ಲೂ ನಕ್ಸಲ್ ಚಟುವಟಿಕೆಗಳು ಇತ್ತೀಚೆಗಿನಿಂದ ಹೆಚ್ಚಾಗತೊಡಗಿದೆ. ದೇಶದ ೭೦ ಜಿಲ್ಲೆಗಳನ್ನು ನಕ್ಸಲ್ ಕೇಂದ್ರಗಳನ್ನಾಗಿ ಗುರುತಿಸಲಾಗಿದ್ದು, ಅದರಲ್ಲಿ ಕೇರಳದ ವಯನಾಡು, ಮಲಪ್ಪುರಂ ಮತ್ತು ಪಾಲ್ಘಾಟ್ ಜಿಲ್ಲೆಗಳಿಗೂ   ಒಳಪಡಿಸಲಾಗಿದೆ. ಬುಡಕಟ್ಟು ಜನಾಂಗ ದವರು ವಾಸಿಸುತ್ತಿರುವ ಪ್ರದೇಶಗಳನ್ನೇ ಪ್ರಧಾನವಾಗಿ  ಕೇಂದ್ರೀಕರಿಸಿ ನಕ್ಸಲರು ಕಾರ್ಯವೆಸಗಿದ್ದಾರೆ. ಇಂತಹ ಪ್ರದೇಶಗಳ ಕಾಲೇಜು ವಿದ್ಯಾರ್ಥಿಗಳಲ್ಲಿ ನಕ್ಸಲ್ ಆಶಯ ವಿನಿಮಯ ನಡೆಸಿ ಆ ಮೂಲಕ ಅವರನ್ನು ತಮ್ಮ ಸಂಘಟನೆಗೆ ಸೇರಿಸಿಕೊಳ್ಳುವ ಪ್ರಯತ್ನದಲ್ಲೂ ನಕ್ಸಲರು ಈಗ ತೊಡಗಿದ್ದಾರೆ.

ಮಾವೋವಾದಿಗಳ ಶಸ್ತ್ರಾಸ್ತ್ರ ವಿಭಾಗವಾದ ಪೀಪಲ್ಸ್ ಆಪರೇಷನ್ ಗೆರಿಲ್ಲಾ ಆರ್ಮಿಯ ಘಟಕಗಳನ್ನು ಪಶ್ಚಿಮ ಘಟ್ಟಗಳಲ್ಲೂ ಈಗ ರೂಪೀಕರಿಸಲಾಗಿದೆ. ಇವರು ಭಾರೀ ಪ್ರಮಾಣದ ಮಾರಕಾಯುಗಳನ್ನು ಹೊಂದಿದ್ದಾರೆ. ಇದರಲ್ಲಿ ಕೇರಳದ ನಕ್ಸಲರಿಗೂ ತರಬೇತಿ ನೀಡಲಾಗುತ್ತಿದೆ.

ವೆಸ್ಟನ್‌ಘಾಟ್‌ನ ವಿಶೇಷ ವಲಯ (ಸ್ಪೆಷಲ್ ಝೋನ್) ಸಮಿತಿ ಇದರ ಮೇಲ್ನೋಟ ವಹಿಸುತ್ತಿದೆ ಎಂದು ಕೇದ್ರ ಗುಪ್ತಚರ ವಿಭಾಗ ಕೇಂದ್ರಕ್ಕೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ. ೨೦೨೨ ಫೆಬ್ರವರಿಯಿಂದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸೇರಿದಂತೆ ಇತರ ಕೇಂದ್ರ ತನಿಖಾ ಸಂಸ್ಥೆಗಳು ನಡೆಸಿದ ತನಿಖಾ ವರದಿಯನ್ನು ಪರಿಶೀಲಿಸಿದ ಬಳಿಕ ಈ ಕೇಂದ್ರ ಗುಪ್ತಚರ ವಿಭಾಗ ಈ ವರದಿ ತಯಾರಿಸಿದೆ. ಕರ್ನಾಟಕ ಮತ್ತು ತಮಿಳುನಾಡು ಸರಕಾರಗಳ ನಕ್ಸಲ್ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿದೆ. ಆದರೆ ಕೇರಳ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದೂ ವರದಿಯಲ್ಲಿ ಹೇಳಲಾಗಿದೆ. ನಕ್ಸಲ್ ಬೆದರಿಕೆ ಎದುರಿಸಲು ವಿಶೇಷ ತರಬೇತಿ ಪಡೆದ ಕಮಾಂಡೋಗಳನ್ನು ಒಳಪಡಿಸಿ, ಕೇರಳದಲ್ಲಿ ವಿಶೇಷ ಪಡೆಗೆ ರೂಪು ನೀಡಲಾಗಿದ್ದರೂ, ಅದರಿಂದ ಹೆಚ್ಚಿನ ಪ್ರಯೋಜನ ಉಂಟಾಗಿಲ್ಲ. ಮಾವೋವಾದಿ  ನೇತಾರರಾದ ಸಿ.ಪಿ. ಮೊದೀನ್, ವಿಕ್ರಂ ಗೌಡಾ ಇತ್ಯಾದಿ ನೇತಾರರನ್ನು ಸೆರೆ ಹಿಡಿಯಲು ಈ ತನಕ ಸಾಧ್ಯವಾಗಿಲ್ಲ. ಮಾವೋವಾದಿ ನೇತಾರರಲ್ಲೋರ್ವನಾದ ಮಲ್ಲರಾಜ ರೆಡ್ಡಿ ಸೇರಿದಂತೆ ಹಲವರು ಮಾವೋವಾದಿಗಳು ಈಗ ಕಾರ್ಮಿಕರ ವೇಷದಲ್ಲಿ ತಿರುಗಾಡುತ್ತಿದ್ದಾರೆಂದು ವರದಿಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page