ಕೇಂದ್ರ ಸಚಿವ ಸಂಪುಟ ಸಭೆ ಇಂದು ಸಂಜೆ ಮಹತ್ವದ ಘೋಷಣೆ ಸಾಧ್ಯತೆ
ನವದೆಹಲಿ: ಕೇಂದ್ರ ಸಚಿವ ಸಂಪುಟ ಸಭೆ ಇಂದು ಸಂಜೆ ೬ ಗಂಟೆಗೆ ಪ್ರಧಾನ ಮಂತ್ರಿ ನರೇಂದ್ರಮೋದಿ ಯವರ ಅಧ್ಯಕ್ಷತೆಯಲ್ಲಿ ಅವರ ಕಲ್ಯಾಣ್ ಮಾರ್ಗದ ನಿವಾಸದಲ್ಲಿ ನಡೆಯಲಿದೆ. ಆ ಬಳಿಕ ರಾತ್ರಿ ೮ ಗಂಟೆಗೆ ಕೇಂದ್ರ ಮಂಡಳಿ ಸಭೆಯೂ ನಡೆಯಲಿದೆ. ಈ ಅನುಚ್ಚೇಧವನ್ನು ರಚಿಸುವ ಕ್ಯಾಬಿನೆಟ್ ಸಭೆಯ ಕಾರ್ಯಸೂಚಿಯನ್ನು ಇನ್ನೂ ಬಹಿರಂಗಪಡಿಸಿಲ್ಲ. ೨೦೨೪ರ ಲೋಕಸಭಾ ಚುನಾವಣೆಯನ್ನು ಮುಂದಕ್ಕೆ ಕಂಡುಕೊಂಡು ಇಂದಿನ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಸರಕಾರ ಮಹತ್ವದ ಘೋಷಣೆ ಹೊರಡಿಸುವ ಸಾಧ್ಯತೆ ಇದೆ. ಮುಂದಿನ ವರ್ಷ ಲೋಕಸಭಾ ಚುನಾವಣೆ ನಡೆಯ ಲಿದ್ದು, ಅದರಿಂದ ಸಂಸತ್ ಚಳಿಗಾಲದ ಅಧಿವೇಶನ ಮೋದಿ ನೇತೃತ್ವದ ಈಗಿನ ಸರಕಾರದ ಕೊನೆಯ ಅಧಿವೇಷನವಾಗಿ ದೆಯೆಂಬುವುದು ಗಮನೀಯ.
ಚಳಿಗಾಲದ ಸಂಸತ್ ಅಧಿವೇಶನ ಮುಂಚಿತವಾಗಿ ಡಿಸೆಂಬರ್ ೨ರಂದು ಕೇಂದ್ರ ಸರಕಾರದ ಪರವಾಗಿ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ್ ಜೋಶಿ ಅವರು ಸರ್ವಪಕ್ಷ ಸಭೆ ಕರೆದಿದ್ದಾರೆ. ೨೦೨೩ರ ಸಂಸತ್ತಿನ ಚಳಿಗಾಲ ಅಧಿವೇಶನ ಡಿಸೆಂಬರ್ ೪ರಂದು ಆರಂಭಗೊಂಡು ಡಿಸೆಂಬರ್ ೨೨ರ ತನಕ ಮುಂದುವರಿಯಲಿದೆ. ಇದರ ಪೂರ್ವಭಾವಿಯಾಗಿ ಪ್ರಧಾನಿ ನರೇಂದ್ರಮೋದಿ ಇಂದು ನವದೆಹಲಿಯ ತಮ್ಮ ನಿವಾಸದಲ್ಲಿ ಕೇಂದ್ರ ಸಚಿವ ಸಂಪುಟದ ಈ ಸಭೆ ಕರೆದಿದ್ದಾರೆ.