ಕಾಸರಗೋಡು: ವೆಳ್ಳರಿಕುಂಡ್ ಬಳಿಯ ನಿವಾಸಿ ಯುವಕನೋರ್ವ ಪರಶ್ಶಿನಿಕಡವು ವಿಸ್ಮಯ ಪಾರ್ಕ್‌ನಲ್ಲಿ ಯುವತಿ ಮುಂದೆ ಲೈಂಗಿಕ ಚೇಷ್ಠೆ ತೋರಿಸಿದ ಆರೋಪದಂತೆ ಸೆರೆಗೀಡಾಗಿದ್ದಾನೆ. ವೆಳ್ಳರಿಕುಂಡ್ ಬಳಿಯ ಪರಪ್ಪ ಮೂಲಪ್ಪಾರದ ಲೈಂಕಿಲಗತ್ತ್ ನಿವಾಸಿ ಕೆ, ಸಫಾದ್ (25) ಎಂಬಾತನನ್ನು ತಳಿಪರಂಬ ಎಸ್‌ಐ ಎನ್.ವಿ. ಪ್ರಕಾಶನ್, ಎಎಸ್‌ಐ ಜಯಶ್ರೀ ಎಂಬಿವರ ನೇತೃತ್ವದಲ್ಲಿ ಬಂಧಿಸಲಾಗಿದೆ. ಆದಿತ್ಯವಾರ ಸಂಜೆ ಪರಶ್ಶಿನಿಕಡವು ವಿಸ್ಮಯ ಪಾರ್ಕ್ ಸಮೀಪ ಘಟನೆ ನಡೆದಿದೆ. ಪಾರ್ಕ್ ವೀಕ್ಷಿಸಲು ತಲುಪಿದ ಕಲ್ಲಿಕೋಟೆ ನಿವಾಸಿ ಮುಂದೆ ಸಫಾದ್ ಲೈಂಗಿಕ ಚೇಷ್ಠೆ ತೋರಿಸಿದ ಬಗ್ಗೆ ದೂರಲಾಗಿದೆ. ಈ ಬಗ್ಗೆ ದೂರು ಲಭಿಸಿದ ಹಿನ್ನೆಲೆಯಲ್ಲಿ ಪೊಲೀಸರು ಸಫಾದ್‌ನನ್ನು ಬಂಧಿಸಿದ್ದಾರೆ.
