ಸ್ಕೂಟರ್‌ನೊಂದಿಗೆ ತೆರಳಿದ ಯುವಕ ನಾಪತ್ತೆ

ಉಪ್ಪಳ: ಸ್ಕೂಟರ್‌ನಲ್ಲಿ ಮನೆಯಿಂದ ಹೊರಗೆ ತೆರಳಿದ ಯುವಕ ಬಳಿಕ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಉಪ್ಪಳ ಮಣ್ಣಂಗುಳಿ ಕೋಡಿಬೈಲು ನಿವಾಸಿ ಮುಹಮ್ಮದ್ ಶಾಹಿಲ್ (28) ನಾಪತ್ತೆಯಾದ ಯುವಕ. ಈ ಬಗ್ಗೆ ಸಹೋದರ ಶೇಕ್ ಮೊಹಮ್ಮದ್ ಸುಹೈಲ್ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಮಂಗಳವಾರ ರಾತ್ರಿ 9.30ರ ವೇಳೆ ಮುಹಮ್ಮದ್ ಶಾಹಿಲ್ ಈಗ ಬರುತ್ತೇನೆಂದು ತಿಳಿಸಿ ಮನೆಯಿಂದ ಹೊರಗೆ ತೆರಳಿದ್ದರು. ಆದರೆ ಇದುವ ರೆಗೆ ಮರಳಿ ಬಂದಿಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ.

RELATED NEWS

You cannot copy contents of this page