ಪುಸ್ತಕಪೂಜೆ: ಸೆ. 30ರಂದು ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲು ಒತ್ತಾಯಿಸಿ ಬ್ರಾಹ್ಮಣ ಮಹಾಸಭಾದಿಂದ ಸರಕಾರಕ್ಕೆ ಮನವಿ

ಕಾಸರಗೋಡು: ನವರಾತ್ರಿ ಮಹೋತ್ಸವದಂಗವಾಗಿ ಈ ತಿಂಗಳ 29ರಂದು ಶಾರದಾ ಪೂಜೆಯ ಪ್ರಯುಕ್ತ ಪುಸ್ತಕ ಹಾಗೂ ಗ್ರಂಥಗಳನ್ನು ಪೂಜೆಗಾಗಿ ಇರಿಸಲಿದ್ದು, ಈ ಹಿನ್ನೆಲೆಯಲ್ಲಿ ೩೦ರಂದು ಶಿಕ್ಷಣ ಸಂಸ್ಥೆಗಳಿಗೆ ಸಾರ್ವತ್ರಿಕ ರಜೆ ಘೋಷಿಸಬೇ ಕೆಂದು ಒತ್ತಾಯಿಸಿ ಕಾಸರಗೋಡು ಬ್ರಾಹ್ಮಣ ಮಹಾಸಭಾ ಸರಕಾರಕ್ಕೆ ಮನವಿ ಸಲ್ಲಿಸಿದೆ.

ಸೆ. 29ರಂದು ಪುಸ್ತಕ, ಗ್ರಂಥಗಳನ್ನು ಪೂಜೆಗಿರಿಸಿದರೆ ಬಳಿಕ ಸರಸ್ವತಿ ಪೂಜೆ ಮುಗಿಯದೆ ಪುಸ್ತಕಗಳನ್ನು ಮುಟ್ಟುವುದಾಗಲೀ, ಬರವಣಿಗೆಯಲ್ಲಿ ತೊಡಗು ವುದಾಗಲೀ ಸಲ್ಲದು ಎಂಬ ರೂಢಿ ಪ್ರಾಚೀನ ಕಾಲದಿಂದಲೇ ಅನುಷ್ಠಾನದಲ್ಲಿದೆ. ಆದುದರಿಂದ ಈ ಬಾರಿ ಸೆ. 29ರಂದು ಅಕ್ಷರ ಪೂಜೆಯಾದ ಪುಸ್ತಕಗಳನ್ನು ಪೂಜೆಗಿಟ್ಟರೆ ಅ.೨ರಂದು ಶಾರದಾ ಪೂಜೆಯ ಬಳಿಕವೇ ಪುಸ್ತಕಗಳನ್ನು ಓದುವ ಹಾಗೂ ಬರೆಯುವ ಪದ್ಧತಿ ಇದೆ.  ಆದರೆ ೩೦ರಂದು ಶಾಲಾ ಚಟುವಟಿಕೆ ದಿನವಾಗಿರುತ್ತದೆ. ಇದು ಸಂಪ್ರದಾಯಗಳನ್ನು ಅನುಸರಿಸುವ ಹಿಂದೂಗಳಿಗೆ ಸಮಸ್ಯೆಯಾಗಲಿದೆ. ಆದ್ದರಿಂದ ಸೆ. 30ರಂದು  ಸಾರ್ವತ್ರಿಕ ರಜೆ ಘೋಷಿಸಿ ಹಿಂದೂ ಧರ್ಮಾನುಷ್ಠಾನಗಳನ್ನು ಪಾಲಿಸುವವರಿಗೆ ಸೌಕರ್ಯ ಕಲ್ಪಿಸಬೇಕೆಂದು ಒತ್ತಾಯಿಸಲಾಗಿದೆ. ಈ ಬೇಡಿಕೆಯನ್ನು ಮುಂದಿಟ್ಟು ಕಾಸರಗೋಡು ಬ್ರಾಹ್ಮಣ ಮಹಾಸಭಾದ ಸಂಚಾಲಕ ಜಯನಾರಾಯಣ ತಾಯನ್ನೂರು ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.

RELATED NEWS

You cannot copy contents of this page