ಪ್ರಧಾನಿ ವಿರುದ್ಧ ಅವಹೇಳನಕಾರಿ ಹೇಳಿಕೆ .ಕಂಗಾಲಾದ ಮಾಲ್ದೀವ್ಸ್ನ ಪ್ರವಾಸೋದ್ಯಮ ವಲಯ: ಭಾರತದಿಂದ ಮತ್ತೊಂದು ‘ಸ್ಟ್ರೋಕ್’; ಲಕ್ಷದ್ವೀಪದಲ್ಲಿ ವಿಮಾನ ನಿಲ್ದಾಣ ಸ್ಥಾಪಿಸಲು ತೀರ್ಮಾನ
ನವದೆಹಲಿ: ಪ್ರಧಾನಮಂತ್ರಿ ನರೇಂದ್ರಮೋದಿಯವರನ್ನು ಅವಹೇಳನಗೈಯ್ಯುವ ರೀತಿಯಲ್ಲಿ ಮಾಲ್ದೀವ್ಸ್ನ ಮೂವರು ಸಚಿವರು ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳನ್ನು ಪೋಸ್ಟ್ ಮಾಡಿದ ಬೆನ್ನಲ್ಲೇ, ಭಾರತ ಸರಕಾರ ಮಾಲ್ದೀವ್ಸ್ನ ಹೈ ಕಮಿಶನರ್ ಸಮನ್ಸ್ ಜ್ಯಾರಿಗೊಳಿಸಿದೆ. ಮಾತ್ರವಲ್ಲ ಇದರ ಬೆನ್ನಲ್ಲೇ ಕೇಂದ್ರದ ಬಿಜೆಪಿ ಸರಕಾರ ಮತ್ತೊಂದು ಮಾಸ್ಟರ್ ಸ್ಟ್ರೋಕ್ಗೆ ಸಜ್ಜಾಗಿದೆ. ಲಕ್ಷದ್ವೀಪ್ ನಲ್ಲಿ ಸುಸಜ್ಜಿತ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೂ ಮುಂದಾಗಿದೆ. ಮಾಲ್ದೀವ್ಸ್ನಲ್ಲಿ ಈಗ ವಿಮಾನ ನಿಲ್ದಾಣವಿಲ್ಲ. ಅದನ್ನು ಸ್ಥಾಪಿಸುವ ಘೋಷಣೆ ಶೀಘ್ರ ಹೊರಡಿಸಲಾ ಗುವುದು. ಕೇಂದ್ರ ಪ್ರವಾಸೋದ್ಯಮ ಸಚಿವ ಜಿ. ಕಿಶನ್ ರೆಡ್ಡಿ ಹೇಳಿದ್ದಾರೆ. ಹಾಗೆ ನಡೆದಲ್ಲಿ ಮಾಲ್ದೀವ್ ಸಂದರ್ಶಿಸುವ ಪ್ರಯಾಣಿಕರು ಅದನ್ನು ಬಿಟ್ಟು ಲಕ್ಷದ್ವೀಪಕ್ಕೆ ನೇರವಾಗಿ ಸಂದರ್ಶಿಸುವ ನಿರೀಕ್ಷೆಯಿದೆ. ಅದು ಮುಂದೆ ಮಾಲ್ದೀವ್ಸ್ಗೆ ಭಾರೀ ದೊಡ್ಡ ಆರ್ಥಿಕ ಹೊಡೆತ ನೀಡಲಿದೆ.
ಪ್ರಧಾನಮಂತ್ರಿ ನರೇಂದ್ರಮೋದಿ ಕಳೆದವಾರ ಲಕ್ಷದ್ವೀಪ್ಗೆ ಸಂದರ್ಶಿಸಿ ಅಲ್ಲಿ ಅವರು ಹಂಚಿಕೊಂಡ ಚಿತ್ರಗಳ ಬಗ್ಗೆ ಮಾಲ್ದೀವ್ಸ್ನ ಸಚಿವರುಗಳಾದ ಮರ್ಯಮ್ ಶಿಯೂನ, ಹಸನ್ ಜಿಹಾನ್ ಮತ್ತು ಮುಲ್ಯ ಅವರು ಪ್ರಧಾನಿ ಮೋದಿಯವರನ್ನು ಅವಹೇಳನಗೈಯ್ಯುವ ರೀತಿಯಲ್ಲಿ ಹಾಗೂ ಆಕ್ಷೇಪಾರ್ಹ ಹೇಳಿಕೆಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಅದರ ವಿರುದ್ಧ ಭಾರತದಾದ್ಯಂತ ಭಾರೀ ಆಕ್ರೋಶ ವ್ಯಕ್ತಗೊಳ್ಳುತ್ತಿದ್ದಂತೆಯೇ, ಆ ಮೂವರು ಸಚಿವರುಗಳನ್ನು ಮಾಲ್ದೀವ್ಸ್ ಸರಕಾರ ತಕ್ಷಣದಿಂದ ಸಚಿವ ಸ್ಥಾನದಿಂದ ವಜಾಗೊಳಿಸಿದೆ. ಆ ಮೂಲಕ ಸಂಕಷ್ಟದಿಂದ ಪಾರಾಗುವ ಯತ್ನವನ್ನು ನಡೆಸಿದೆ. ಪ್ರಧಾನಿ ಮೋದಿ ಅವರ ಲಕ್ಷದ್ವೀಪ ಸಂದರ್ಶನ ಅಲ್ಲಿನ ಪ್ರವಾಸೋದಮಕ್ಕೆ ಭಾರೀ ಉತ್ತೇಜನ ನೀಡತೊಡಗಿದ್ದು, ಅದರಿಂದ ಅಸೂಯೆಗೊಂಡ ಈ ಮೂವರು ಸಚಿವರುಗಳು ನಿಂದನಾರ್ಹ ಹೇಳಿಕೆ ನೀಡಿದ್ದು, ಅದಕ್ಕೆ ಅವರೇ ಕೊನೆಗೆ ತಲೆದಂಡ ನೀಡಬೇಕಾಗಿ ಬಂದಿದೆ.
ಪ್ರವಾಸೋದ್ಯಮ ಮಾಲ್ದೀವ್ಸ್ನ ಪ್ರಧಾನ ಆದಾಯಮಾರ್ಗವಾಗಿದೆ. ಶೇ. ೫೦ರಷ್ಟು ಆದಾಯ ಈ ವಲಯದಿಂ ದಲೇ ಬರುತ್ತಿದೆ. ಭಾರತೀಯರೇ ಅತೀ ಹೆಚ್ಚಾಗಿ ಮಾಲ್ದೀವ್ಸ್ಗೆ ಪ್ರವಾಸ ನಡೆಸುತ್ತಿದ್ದಾರೆ.