ಕೊಲ್ಲಂ: ಅಪರಿಚಿತ ಮಹಿಳೆಯ ಮೃತದೇಹ ರಬ್ಬರ್ ತೋಟದಲ್ಲಿ ಜೀರ್ಣಸಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕೊಲ್ಲಂ ಸಮೀಪ ನಡೆದಿದೆ. ಪುನಲೂರು ಮುಕ್ಕಡವು ಮಲೆನಾಡು ಹೆದ್ದಾರಿ ಸಮೀಪದ ರಬ್ಬರ್ ತೋಟದಲ್ಲಿ ಮೃತದೇಹ ಪತ್ತೆಯಾಗಿದೆ. ಪೂರ್ಣ ಜೀರ್ಣಾವಸ್ಥೆಯಲ್ಲಿರುವ ಮೃತದೇಹದ ಕೈ ಕಾಲುಗಳನ್ನು ಸರಪಳಿಯಿಂದ ಬಂಧಿಸಲಾಗಿದೆ. ಸರಪಳಿಯ ಒಂದು ತುದಿಯನ್ನು ಮರಕ್ಕೆ ಕಟ್ಟಿದ ಸ್ಥಿತಿಯಲ್ಲಿದೆ. ಸ್ಥಳೀಯ ನಿವಾಸಿಯೊಬ್ಬರು ರಬ್ಬರ್ ತೋಟಕ್ಕೆ ತೆರಳಿದಾಗ ಮೃತದೇಹ ಕಂಡುಬಂದಿದೆ. ಇದೀಗ ಟ್ಯಾಪಿಂಗ್ ಇಲ್ಲದ ಕಾರಣ ರಬ್ಬರ್ ತೋಟ ಕಾಡು ತುಂಬಿಕೊಂಡಿದ್ದು ಅದರ ಮಧ್ಯೆ ಮೃತದೇಹ ಪತ್ತೆಯಾಗಿದೆ. ವಿಷಯ ತಿಳಿದು ಪುನಲೂರು ಪೊಲೀಸರು ಸ್ಥಳಕ್ಕೆ ತಲುಪಿದ್ದು, ಮೃತ ಮಹಿಳೆ ಯಾರೆಂದು ತಿಳಿಯಲು ತನಿಖೆ ಮುಂದುವರಿಯುತ್ತಿದೆ.
