ಕಾಸರಗೋಡು: ಚೆಮ್ನಾಡು ಪಂಚಾಯತ್ ವತಿಯಿಂದ ಹೊಸತಾಗಿ ನಿರ್ಮಿಸಿದ ಕಚೇರಿಯ ಉದ್ಘಾಟನೆಯನ್ನು ಲೀಗ್ ನೇತಾರನಿಂದ ಮಾಡಿಸುತ್ತಿರುವುದು ರಾಜಕೀಯ ದಿವಾಳಿತನವೆಂದು ಬಿಜೆಪಿ ಚೆಮ್ನಾಡು ಪಂಚಾಯತ್ ಸಮಿತಿ ಆರೋಪಿಸಿದೆ. ಸರಕಾರಿ ಸಂಸ್ಥೆಗಳನ್ನು ಆಯಾ ಸಂಸ್ಥೆಗಳು ನೆಲೆಗೊಂಡಿರುವ ಪ್ರದೇಶದ ಜನಪ್ರತಿನಿಧಿಗಳು ಅಥವಾ ಸಚಿವರು ಸಾಮಾನ್ಯವಾಗಿ ಉದ್ಘಾಟಿಸಬೇಕಾಗಿದ್ದು, ಈ ಶಿಷ್ಟಾಚಾರವನ್ನು ಉಲ್ಲಂಘಿಸಿ ಮುಸ್ಲಿಂ ಲೀಗ್ ಮುಖಂಡನನ್ನು ಉದ್ಘಾಟಕ ರನ್ನಾಗಿಸಿರುವುದು ರಾಜಕೀಯ ಉದ್ದೇಶದಿಂದವೆಂದು ಬಿಜೆಪಿ ದೂರಿದೆ. ಮುಂದೆ ಕೇರಳ ರಾಜ ಕೀಯದಲ್ಲಿ ಉಂಟಾಗಬಹುದಾದ ರಾಜಕೀಯ ಸಂಚಲನೆಯ ಸೂಚನೆ ಇದೆಂದು ಬಿಜೆಪಿ ತಿಳಿಸಿದೆ. ಐಕ್ಯರಂಗ ರಾಜ್ಯದಲ್ಲಿ ಆಡಳಿತಕ್ಕೇರಬೇ ಕಾಗಿರುವುದು ಮುಸ್ಲಿಂ ಸಮುದಾಯಕ್ಕೆ ಬೇಕಾಗಿಯಾಗಬೇಕು ಎಂಬ ಲೀಗ್ ಮುಖಂಡ ಕೆ.ಎಂ. ಶಾಜಿಯವರ ಹೇಳಿಕೆ ಇದರ ಜೊತೆ ಓದಿಕೊಳ್ಳಬೇಕೆಂದು ಬಿಜೆಪಿ ಪಂ. ಸಮಿತಿ ತಿಳಿಸಿದೆ. ಸ್ಥಳದ ಸಂಸದನನ್ನು ಕರೆಸದೆ ಇನ್ನೊಂದು ಜಿಲ್ಲೆಯ ಶಾಸಕನನ್ನು ಕರೆಸಿ ಪಂಚಾಯತ್ ಕಚೇರಿ ಉದ್ಘಾಟಿಸುವುದರ ಬಗ್ಗೆ ಕಾಂಗ್ರೆಸ್ ಅಭಿಪ್ರಾಯ ಹೇಳಬೇಕೆಂದು ಬಿಜೆಪಿ ಪಂ. ಸಮಿತಿ ಸಭೆ ಆಗ್ರಹಿಸಿದೆ.
ಈ ಬಗ್ಗೆ ನಡೆದ ಸಭೆಯಲ್ಲಿ ಸಮಿತಿ ಅಧ್ಯಕ್ಷ ರಾಜೇಶ್ ಕೈಂದಾರ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್. ಬಾಬುರಾಜ್, ಜಿಲ್ಲಾ ಕಾರ್ಯದರ್ಶಿ ಪುರುಷೋತ್ತಮನ್ ಟಿ.ಕೆ, ಮಂಡಲ ಉಪಾಧ್ಯಕ್ಷರಾದ ಸದಾಶಿವನ್ ಮಣಿಯಂಗಾನಂ, ತಂಬಾನ್ ಅಚ್ಚೇರಿ, ನಾರಾಯಣನ್ ಎಡಕ್ಕಿನಿ ಯ, ಮಂಡಲ ಕಾರ್ಯದರ್ಶಿ ಸೌಮ್ಯ ಪದ್ಮನಾಭನ್ ಮಾತನಾಡಿ ದರು. ಮುರಳೀಕೃಷ್ಣನ್ ಅಚ್ಚೇರಿ ಸ್ವಾಗ ತಿಸಿ, ರತೀಶ್ ವಿ.ವಿ. ವಂದಿಸಿದರು.





