ಅಸೌಖ್ಯ ಬಾಧಿಸಿದ್ದ ಯುವಕ ನಿಧನ

ನೀರ್ಚಾಲು: ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದ ಯುವಕ ಮೃತಪಟ್ಟನು. ಪುದುಕೋಳಿ ಪರಿಶಿಷ್ಟ ಜಾತಿ ಉನ್ನತಿಯ ಉಮೇಶ್ (34) ಮೃತ ವ್ಯಕ್ತಿ.  ಅಸೌಖ್ಯ ಬಾಧಿಸಿದ್ದ ಇವರು ಹಲವು ತಿಂಗಳುಗಳಿಂದ ತಲಶ್ಶೇರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಬಾಲಕೃಷ್ಣ-ಲಕ್ಷ್ಮಿ ದಂಪತಿಯ ಪುತ್ರನಾದ ಮೃತರು ಸಹೋದರ ಅಭಿಲಾಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page