ಸೋಂಕಾಲು ಜಂಕ್ಷನ್‌ನಲ್ಲಿ ಹೆಚ್ಚುತ್ತಿರುವ ಅಪಘಾತಗಳು: ಹಂಪ್ ನಿರ್ಮಿಸಲು ಊರವರ ಒತ್ತಾಯ

ಉಪ್ಪಳ: ಕೈಕಂಬ-ಬಾಯಾರು ರಸ್ತೆಯ ಸೋಂಕಾಲು ಜಂಕ್ಷನ್‌ನಲ್ಲಿ ವಾಹನ ಅಪಘಾತಗಳು ವ್ಯಾಪಕಗೊಳ್ಳುತ್ತಿರುವುದು ಊರವರನ್ನು ಆತಂಕಕ್ಕೀಡು ಮಾಡಿದೆ. ಕಳೆದ ಭಾನುವಾರ ಸ್ಕೂಟರ್‌ಗೆ ಕಾರು ಡಿಕ್ಕಿಹೊಡೆದು ಕುಳೂರು ಉಮಿಕಳ ನಿವಾಸಿ ಮೊಹಮ್ಮದ್ ಹನೀಫ್ ಮೃತಪಟ್ಟಿದ್ದಲ್ಲದೆ.
ಈ ಹಿಂದೆ ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿಯಾಗಿ ಪುಳಿಕುತ್ತಿಯಲ್ಲಿ ವಾಸವಾಗಿರುವ ವೆಂಕಟ್ರಮಣ ಆಚಾರ್ಯ ಹಾಗೂ ಸ್ಕೂಟರ್ ಕಾರು ಡಿಕ್ಕಿಯಾಗಿ ಯುವಕ ನೋರ್ವ ಮೃತಪಟ್ಟ ಘಟನೆ ನಡೆದಿದೆ. ಅಲ್ಲದೆ ಸಣ್ಣಪುಟ್ಟ ಅಪಘಾತದಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಂಕಾಲಿನಿAದ ಕೊಡಂಗೆ-ಪ್ರತಾಪನಗರ ರಸ್ತೆಗೆ ಸಂಗಮಿಸುವ ಪರಿಸರದಲ್ಲಿ ಹಂಪ್ ಸ್ಥಾಪಿಸಿ ವಾಹನಗಳ ವೇಗವನ್ನು ನಿಯಂತ್ರಿಸಬೇಕೆAದು ಆಗ್ರಹಿಸಿ ಮಂಗಲ್ಪಾಡಿ ಪಂಚಾಯತ್ ಮಾಜಿ ಸದಸ್ಯ ಕೆ.ಪಿ ವಲ್ಸರಾಜ್ ರವರ ನೇತೃತ್ವದಲ್ಲಿ ಊರವರು ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್‌ರಿಗೆ ಮನವಿ ನೀಡಿದ್ದಾರೆ. ಇದಕ್ಕೆ ಶೀಘ್ರದಲ್ಲಿ ಕ್ರಮಕೈಗೊಳ್ಳುವುದಾಗಿ ಶಾಸಕರು ಭರವಸೆ ನೀಡಿದ್ದಾರೆ.
ಜನನಿಬಿಡ ಪ್ರದೇಶವಾದ ಇಲ್ಲಿ ವಾಹನಗಳು ಅಪರಿಮಿತ ವೇಗದಲ್ಲಿ ಸಂಚರಿಸುವುದರಿAದ ರಸ್ತೆ ದಾಟಲು ಭಾರೀ ಆತಂಕ ಉಂಟಾಗಿದೆ. ಬಾಯಾರಿನಿಂದ ಕೈಕಂಬ ತನಕ ರಸ್ತೆಗೆ ಮರು ಡಾವiರೀಕರಣ ಗೊಳಿಸಲಾಗುತ್ತಿದೆ. ಈ ವೇಳೆ ವಿವಿಧೆಡೆಗಳಿಂದ ತೆರವುಗೊಳಿಸಿದ ಹಂಪ್‌ನ್ನು ಕೂಡಾ ಸ್ಥಾಪಿಸಲು ಊರವರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page