ಪತ್ನಿಯ ತಲೆಗೆ ಹೊಡೆದು ಕೊಲೆಗೆ ಯತ್ನ: ಆರೋಪಿ ಸೆರೆ

ಕಾಸರಗೋಡು:  ಪತ್ನಿಯ ತಲೆಗೆ  ಮರದ  ಬೆತ್ತದಿಂದ   ಹೊಡೆದು  ಕೊಲೆಗೈಯ್ಯಲು ಯತ್ನಿಸಿದ ಸಹಿತ ಎಂಟರಷ್ಟು ಪ್ರಕರಣಗಳಲ್ಲಿ ಆರೋಪಿ ಯಾದ  ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ನುಳ್ಳಿಪ್ಪಾಡಿಯ  ಎನ್. ಮಣಿ (೪೦) ಎಂಬಾತನನ್ನು ಎಸ್‌ಐ ಕೆ.ಪಿ. ವಿನೋದ್ ಕುಮಾರ್ ನೇತೃ ತ್ವದಲ್ಲಿ ಬಂಧಿಸಲಾಗಿದೆ. ೨೦೨೨ರಲ್ಲಿ  ಪತ್ನಿ ಸುನಿತರಿಗೆ ಮರದ ಬೆತ್ತದಿಂದ ತಲೆಗೆ ಹೊಡೆದು ಗಂಭೀರಗಾ ಯಗೊಳಿಸಿದ ಆರೋಪದಂತೆ  ಈತನ ವಿರುದ್ಧ ನರಹತ್ಯಾಯತ್ನಕ್ಕೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.  ಮಣಿ ವಿರುದ್ಧ ಇನ್ನೂ ಎಂಟರಷ್ಟು ಪ್ರಕರಣಗ ಳಿವೆಯೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page