ಪೆರ್ಮುದೆ: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಪೆರ್ಮುದೆ ಘಟಕದ ವಾರ್ಷಿಕ ಮಹಾಸಭೆ ಪೆರ್ಮುದೆ ಚರ್ಚ್ ಹಾಲ್ನಲ್ಲಿ ನಡೆಯಿತು. ಜಿಲ್ಲಾಧ್ಯಕ್ಷ, ರಾಜ್ಯ ಉಪಾಧ್ಯಕ್ಷ ಅಹಮದ್ ಶರೀಫ್ ಉದ್ಘಾಟಿಸಿದರು. ಪೆರ್ಮುದೆ ಘಟಕದ ಅಧ್ಯಕ್ಷ ಎ ವೈ ಅಬ್ಬಾಸ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ ಜೆ ಸಜಿ ವ್ಯಾಪಾರಿಗಳಿಗಿರುವ ಕ್ಷೇಮ ಯೋಜನೆಯ ವಿವರಗಳನ್ನು ನೀಡಿದರು. ಕಾರ್ಯದರ್ಶಿ ದಿನೇಶ್ ಶುಭ ಹಾರೈಸಿದರು. ಯಾವುದೇ ಪರವಾನಿಗೆ ಇಲ್ಲದೆ ಫುಟ್ಪಾತ್ನಲ್ಲಿ ನಡೆಯುವ ಅನಧಿಕೃತ ವ್ಯಾಪಾರ ದಿಂದಾಗಿ ಅಧಿಕೃತ ವ್ಯಾಪಾರಿಗಳು ತೊಂದರೆ ಅನುಭವಿಸುವುದರೊಂ ದಿಗೆ ಪ್ಲಾಸ್ಟಿಕ್ ನ ಹೆಸರು ಹೇಳಿ ನಿರಂತರವಾಗಿ ವ್ಯಾಪಾರಿಗಳಿಗೆ ಕಿರುಕುಳ ಕೊಡುವ ಅಧಿಕಾರಿಗಳ ವಿರುದ್ಧ ಎಲ್ಲಾ ವ್ಯಾಪಾರಿಗಳು ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಿದರು. ಜಿಲ್ಲಾ ವ್ಯಾಪಾರಿ ಭವನ ನಿರ್ಮಾಣಕ್ಕೆ ನಮ್ಮ ಘಟಕದಿಂದ ಧನಸಹಾಯ ವನ್ನು ಹಸ್ತಾಂತರಿಸಲಾಯಿತು . ಸಭೆಯಲ್ಲಿ ಹಿರಿಯ ವ್ಯಾಪಾರಿಗಳಾದ ಬಾಲಕೃಷ್ಣ ಶೆಟ್ಟಿ, ಯೂಸಫ್ ಹಾಜಿ ಉಪಸ್ಥಿತರಿದ್ದರು. ಕಾರ್ಯಕಾರಿ ಸಮಿತಿ ಸದಸ್ಯ ಬಿ ಎ ಲತೀಫ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ವರದಿ ವಾಚಿಸಿ, ಗೋವಿಂದ್ ರಾಜ್ ಭಟ್ ಲೆಕ್ಕಪತ್ರ ಮಂಡಿಸಿದರು, ವಿಜಯಕುಮಾರ್ ವಂದಿಸಿದರು.







