ಉಪ್ಪಳ: ಸುದೀರ್ಘ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಉಪ್ಪಳ ವಿದ್ಯುತ್ ಸೆಕ್ಷನ್ ಸಬ್ ಇಂಜಿನಿಯರ್ ಸೆಬಾಸ್ಟಿನ್ರಿಗೆ ಉಪ್ಪಳ ವ್ಯಾಪಾರ ಭವನದಲ್ಲಿ ನಡೆದ ಸಮಾರಂಭದಲ್ಲಿ ಬೀಳ್ಕೊಡುಗೆ ನೀಡಲಾಯಿತು. ಕಳೆದ 29 ವರ್ಷಗಳಲ್ಲಿ ಇವರು ಕಾಸರ ಗೋಡು ನೆಲ್ಲಿಕುಂಜೆ, ಪೈವಳಿಕೆ, ಉಪ್ಪಳ ಸೇರಿದಂತೆ ವಿವಿಧ ಸೆಕ್ಷನ್ಗಳಲ್ಲಿ ಸೇವೆ ಸಲ್ಲಿಸಿದ್ದರು. ಉಪ್ಪಳ ಸಬ್ ಅಸಿಸ್ಟೆಂಟ್ ಇಂಜಿನಿಯರ್ ಜಯನ್ರ ಅಧ್ಯಕ್ಷತೆಯಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭವನ್ನು ಕಾಸರಗೋಡು ಎಕ್ಸಿಕ್ಯೂಟಿವ್ ಇಂಜಿನಿಯರ್ ನಾಗರಾಜ ಭಟ್ ಉದ್ಘಾಟಿಸಿದರು. ಈ ಸಂದರ್ಭ ವಿದ್ಯುತ್ ಇಲಾಖೆ ಅಧಿಕಾರಿಗಳಾದ ನಂದ ಗೋಪಾಲ್, ರೋಹಿತ್, ಅನೀಶ್, ಸುಧೀರ್, ಶಾಜಿ, ಮಿಥುನ್, ಪ್ರಶಾಂತ್ ಮೊದ ಲಾದವರು ಶುಭ ಹಾರೈಸಿ ಮಾತನಾ ಡಿದರು. ಸೆಬಾಸ್ಟಿಯನ್ ರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು







