ಕೇರಳ ಕೇಂದ್ರೀಯ ವಿವಿಯ ಘಟಿಕೋತ್ಸವ ಕಾರ್ಯಕ್ರಮ ಆರಂಭ

ಕಾಸರಗೋಡು: ಪೆರಿಯಾದಲ್ಲಿ ರುವ ಕೇರಳ ಕೇಂದ್ರೀಯ ವಿಶ್ವವಿದ್ಯಾ ಲಯದ ೯ನೇ ಘಟಿಕೋತ್ಸವ ಪ್ರಸ್ತುತ ವಿಶ್ವವಿದ್ಯಾಲಯದ ತೇಜಸ್ವಿನಿ ಹಿಲ್ ಸಭಾಂಗಣದಲ್ಲಿ ಇಂದು ಬೆಳಿಗ್ಗೆ ಆರಂಭಗೊಂಡಿತು.

ನವದೆಹಲಿಯ ಡಿ.ಎನ್.ಐ.ಆರ್ ಕಾರ್ಯದರ್ಶಿ ಹಾಗೂ ಸಿಎನ್‌ಐಆರ್‌ನ ಆಡಳಿತ ನಿರ್ದೇಶಕ ಡಾ.ಎನ್. ಕಲೈಸೆಲ್ವಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಕೇಂದ್ರೀಯ ವಿವಿಯ ಉಪಕುಲಪತಿ ಪ್ರೊ. ಸಿದ್ದು ಪಿ. ಅಲ್‌ಗರ್ ಅಧ್ಯಕ್ಷತೆ ವಹಿಸಿದರು. ಕೇಂದ್ರೀಯ ವಿವಿಯ ರಿಜಿಸ್ಟ್ರಾರ್ (ಉಸ್ತುವಾರಿ) ಹಾಗೂ ಕಂಟ್ರೋ ಲರ್ ಆಫ್ ಎಕ್ಸಾಮಿನೇಷನ್ ಡಾ. ಜಯಪ್ರಕಾಶ್ ಆರ್ ಕಾರ್ಯಕ್ರಮ ನಿರೂಪಿಸಿದರು.   ಪ್ರಸ್ತುತ ವಿವಿಯಲ್ಲಿ 2025ರಲ್ಲಿ ಒಟ್ಟು 923 ವಿದ್ಯಾರ್ಥಿಗಳು ತಮ್ಮ ಅಧ್ಯಯನ ಪೂರೈಸಿದ್ದು, ಇದರಲ್ಲಿ 750 ಮಂದಿಗೆ ಇಂದಿನ ಕಾರ್ಯಕ್ರಮದಲ್ಲಿ ನೇರವಾಗಿ ಸರ್ಟಿಫಿಕೇಟ್ ವಿತರಿಸಲಾಯಿತು. ಇದರಲ್ಲಿ ಪದವಿ ಕೋರ್ಸ್ ಪೂರ್ತೀಕರಿಸಿದ 36, ಸ್ನಾತಕೋತ್ತರ ಪದವಿ ಪೂರ್ತೀಕರಿಸಿದ 771 ಮಂದಿ ಮತ್ತು ಪಿ.ಎಚ್.ಡಿ ಪೂರ್ತೀಕರಿಸಿದ 36 ಮಂದಿ ಒಳಗೊಂಡಿದ್ದಾರೆ. ಇದರ ಹೊರತಾಗಿ ಪಿಜಿ ಡಿಪ್ಲೊಮಾ ಕೋರ್ಸ್ ಪೂರ್ತೀಕರಿಸಿದ 80 ಮಂದಿ ವಿದ್ಯಾರ್ಥಿಗಳಿಗೂ ಸರ್ಟಿಫಿಕೇಟ್ ವಿತರಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಪರಂಪರಾಗತ ರೀತಿಯ ವೇಷಗಳೊಂದಿಗೆ ಗಣ್ಯ ವ್ಯಕ್ತಿಗಳು, ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಭಾಗವಹಿಸಿದರು. ಘಟಿಕೋತ್ಸವದ ಅಂಗವಾಗಿ ಶೋಭಾ ಯಾತ್ರೆಯನ್ನು ನಡೆಸಲಾಯಿತು. ವಿವಿಧ ಅಧ್ಯಯನ ವಿಭಾಗಗಳಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ವಿತರಿಸಲಾಯಿತು. ಇದರಂತೆ ಐಶ್ವರ್ಯ ವಿ, ನಮಿತಲಕ್ಷ್ಮಿ ಪಿ.ವಿ, ಅಶ್ವತಿ ಆರ್.ಎಚ್, ಮಂಜುಶ್ರೀ, ಶಿವಾನಿ ಮತ್ತು ಅಖಿಲ ಎಸ್ ಎಂಬಿವರಿಗೆ ಈ ಚಿನ್ನದ ಪದಕಗಳನ್ನು ಪ್ರದಾನಗೈಯ್ಯಲಾ ಯಿತು. ವಿಶ್ವವಿದ್ಯಾಲಯದ ಫಿನಾನ್ಸ್ ಆಫೀಸರ್ ಪ್ರೊ. ರಾಜೇಂದ್ರ ಪಿಲಾಂಕಟ್ಟೆ, ಪಬ್ಲಿಸಿಟಿ ಮೀಡಿಯಾ ಸಮಿತಿ ಅಧ್ಯಕ್ಷ ಪ್ರೊ. ಮನು ಮತ್ತು ಪಬ್ಲಿಕ್ ರಿಲೇಷನ್ ಆಫೀಸರ್ ಕೆ. ಸುಜಿತ್ ಮೊದಲಾದವರು ಕಾರ್ಯಕ್ರಮ ನಿರ್ವಹಿಸಿದರು.

You cannot copy contents of this page