ಮುಳ್ಳೇರಿಯ : ಬಂಟ ಸಮಾಜ ತಮ್ಮ ಅವಶ್ಯಕತೆಗಳ ಬಗ್ಗೆ ಹೋರಾಟಕ್ಕಿ ಳಿಯಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಉದ್ಯಮಿ, ಮಹಾ ದಾನಿ ಆಗಿರುವ ಕುಳೂರು ಕನ್ಯಾನ ಸದಾಶಿವ ಶೆಟ್ಟಿ, ಮತ್ತು ಕುತ್ತಿಕ್ಕಾರು ಕೆ ಕೆ ಶೆಟ್ಟರು ಬಂಟ ಸಮಾಜದ ಸುಧಾ ರಣೆಗೆ ಬಹಳಷ್ಟು ಪ್ರಯತ್ನಿಸುತ್ತರಾ ದರೂ ಅವರಿಗೆ ಬೆಂಬಲವಾಗಿ ಬಂಟರು ಒಗ್ಗಟ್ಟಾಗಿ ನಿಲ್ಲಬೇಕಾಗಿದೆ ಹಾಗೂ ಹಕ್ಕುಗಳಿಗಾಗಿ ಹೋರಾಟಕ್ಕೆ ಮುಂದಾಗಬೇಕೆAದು ಕಾಸರಗೋಡು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಸುಬ್ಬಯ್ಯ ರೈ ಅಭಿಪ್ರಾಯ ಪಟ್ಟರು. ನಾರಂಪಾಡಿಯ ಕುಟುಂಬಸ್ಥರ ಗುತ್ತಿನ ಮನೆಯಲ್ಲಿ ಚೆಂಗಳ ಪಂಚಾಯತ್ ಬಂಟರ ಸಮಾವೇಶವನ್ನು ಉದ್ಘಾಟಿ ಸಿದರು. ಸಂಜೀವ ರೈ ಪಣಿಯೆ ಅಧ್ಯಕ್ಷತೆ ವಹಿಸಿದರು. ವಲಯ ಬಂಟರ ಸಂಘದ ಅಧ್ಯಕ್ಷ, ಹಿರಿಯ ಪತ್ರಕರ್ತ ಸುಬ್ಬಣ್ಣ ಆಳ್ವ ಕಾಸರಗೋಡು ಬಂಟರ ಸಂಘ ಬೆಳೆದು ಬಂದ ದಾರಿಯ ಬಗ್ಗೆ ವಿವರಿಸಿದರು ಮುಖ್ಯ ಅತಿಥಿ ಡಾ| ವಿದ್ಯಾ ಮೋಹನದಾಸ್ ರೈ ಬಂಟ ಮಹಿಳೆಯರು ಸಂಘದ ಚಟು ವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕಾದ ಔಚಿತ್ಯ ಮತ್ತು ಅನಿವಾರ್ಯತೆ ಬಗ್ಗೆ ಮಾತನಾಡಿದರು.
ವಲಯ ಬಂಟರ ಸಂಘದ ಕಾರ್ಯದರ್ಶಿ ರವೀಂದ್ರ ರೈ ಮಲ್ಲಾವರ ಬಂಟರ ಸಂಪ್ರದಾಯ, ಆಚಾರ, ಅನುಷ್ಠಾನಗಳ ಕುರಿತು ವಿವರಿಸಿದರು. ಕಾಸರಗೋಡು ವಲಯ ಬಂಟರ ಸಂಘದಮಾಜಿ ಅಧ್ಯಕ್ಷ ಬಾಲಕೃಷ್ಣ ರೈ, ಜಿಲ್ಲ್ಲಾ ಬಂಟರ ಸಂಘದ ಜತೆ ಕಾರ್ಯದರ್ಶಿ ಕಿರಣ್ ಮಾಡ, ನಾರಂಪಾಡಿ ಕುಟುಂಬದ ಯಜಮಾನ ತ್ಯಾಂಪಣ್ಣ ಭಂಡಾರಿ, ಭರತ್ ಶೆಟ್ಟಿ, ನೆಕ್ರಾಜೆ ನ್ಯಾಯವಾದಿ ಮನೋಜ್ ಆಳ್ವ, ಲತಾ ಬಾಲಕೃಷ್ಣ ರೈ ನಾರಂಪಾಡಿ, ವಿಶ್ವನಾಥ ಶೆಟ್ಟಿ ನೆಕ್ರಾಜೆ, ನಿವೃತ್ತ ಉಪ ತಹಸೀಲ್ದಾರ್ ರಾಮಣ್ಣ ರೈ,ಕಾರ್ತಿಕ್ ರೈ, ರಾಧಾಕೃಷ್ಣ ರೈ ಉಪಸ್ಥಿತರಿದ್ದರು. ದೇವರಾಜ ಭಂ ಡಾರಿ ನಿರೂಪಿಸಿದರು. ಪ್ರಕಾಶ್ ರೈ ಸ್ವಾಗತಿಸಿ, ರತ್ನಾಕರ ಆಳ್ವ ಪುಂಡೂರು ಪ್ರಸ್ತಾವಿಕ ನುಡಿದರು.ಜಯಪ್ರಕಾಶ್ ರೈ ಮಲ್ತಿಗುರಿ ವಂದಿಸಿದರು






