ರಾಜ್ಯ ಸ್ಥಳೀಯಾಡಳಿತ ಸಂಸ್ಥೆ ಚುನಾವಣಾ ಕಾವಿನಲ್ಲಿ: ಕಾಸರಗೋಡಿನಲ್ಲಿ ಡಿ. 11ರಂದು ಮತದಾನ: ಮತ ಎಣಿಕೆ ಡಿ. 13ರಂದು

ತಿರುವನಂತಪುರ: ರಾಜ್ಯ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣಾ ದಿನಾಂಕವನ್ನು ರಾಜ್ಯ ಚುನಾವಣಾಧಿಕಾರಿ ಎ. ಶಾಜಹಾನ್ ನಿನ್ನೆ ವಿದ್ಯುಕ್ತವಾಗಿ ಘೋಷಿಸಿರುವ ಬೆನ್ನಲ್ಲೇ ರಾಜ್ಯ ಚುನಾವಣಾ ಕಾವಿನತ್ತ ಸಾಗತೊಡಗಿದೆ. ಡಿಸೆಂಬರ್ 9 ಮತ್ತು 11 ಎಂಬೀ ಎರಡು ಹಂತಗಳಲ್ಲಾಗಿ ಮತದಾನ ನಡೆಯಲಿದೆ. ಡಿಸೆಂಬರ್ 13ರಂದು ಮತ ಎಣಿಕೆ ನಡೆಯಲಿದೆ. ಬೆಳಿಗ್ಗೆ 7ರಿಂದ ಸಂಜೆ 6ರ ತನಕ ಮತದಾನದ ಸಮಯ ನಿಗದಿಪಡಿಸ ಲಾಗಿದ. ಪ್ರಥಮ ಹಂತದಲ್ಲಿ ಡಿ. 9ರಂದು ತಿರುವನಂತಪುರ, ಕೊಲ್ಲಂ, ಪತ್ತನಂತಿಟ್ಟ, ಆಲಪ್ಪುಳ, ಕೋಟ್ಟಯಂ, ಇಡುಕ್ಕಿ ಮತ್ತು ದ್ವಿತೀಯ ಹಂತದಲ್ಲಿ ಡಿ.11 ರಂದು ಕಾಸರಗೋಡು, ಕಣ್ಣೂರು, ವಯನಾಡು, ಕಲ್ಲಿಕೋಟೆ, ಮಲಪ್ಪುರಂ, ಪಾಲಕ್ಕಾಡ್ ಮತ್ತು ತೃಶೂರು ಜಿಲ್ಲೆಗಳಲ್ಲಿ ಚುನಾವಣೆ ನಡೆಯಲಿದೆ. ಈ ಎರಡು ಹಂತಗಳಲ್ಲಿ ಚುನಾವಣೆ ಅಧಿಸೂಚನೆಯನ್ನು ನವಂಬರ್ 14ರಂದು ಹೊರಡಿಸಲಾ ಗುವುದು. ಬಳಿಕ ಅಂದಿನಿAದಲೇ ನಾಮಪತ್ರ ಸಲ್ಲಿಕೆ ಕ್ರಮ ಆರಂಭಗೊಳ್ಳಲಿದೆ. ಚುನಾವಣಾ ನೀತಿ ಸಂಹಿತೆ ನಿನ್ನೆಯಿಂದಲೇ ಜ್ಯಾರಿಗೆಬಂದಿದೆ. ಮಟ್ಟನ್ನೂರನ್ನು ಹೊರತುಪಡಿಸಿ ರಾಜ್ಯದ ಇತರ 1999 ಸ್ಥಳೀಯಾಡಳಿತ ಸಂಸ್ಥೆಗಳ ಈಗಿನ ಆಡಳಿತ ಸಮಿತಿಯ ಆಡಳಿತಾವಧಿ ಡಿಸೆಂಬರ್ 13ರಂದು ಕೊನೆಗೊಳ್ಳಲಿದೆ. ನಂತರ ಹೊಸ ಆಡಳಿತ ಸಮಿತಿಗಳು ಅಸ್ತಿತ್ವಕ್ಕೆ ಬರಲಿದೆ.
ಅಂತಿಮ ಮತದಾರ ಪಟ್ಟಿಯನ್ನು ನ. 14ರಂದು ಪ್ರಕಟಿಸಲಾಗುವುದು. ರಾಜ್ಯದ 244 ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ. ಮತದಾನದ ದಿನದಂದು ಆಯಾ ಜಿಲ್ಲೆಗಳಿಗೆ ರಜೆ ಸಾರಲಾಗಿದೆ. ರಾಜ್ಯದಲ್ಲಿ 1,34,12,470 ಗಂಡಸರು, 1,50,18,010 ಮಹಿಳೆಯರು ಮತ್ತು 281 ಮಂಗಳಮುಖಿಯರು ಸೇರಿದಂತೆ ಒಟ್ಟು 2,84,30,761 ಮತದಾರರಿದ್ದಾರೆ. ಇದರ ಹೊರತಾಗಿ 2841 ಅನಿವಾಸಿ ಕೇರಳೀಯರು ಯಾದಿಯಲ್ಲಿ ಒಳಗೊಂಡಿದ್ದಾರೆ. ರಾಜ್ಯಾದ್ಯಂ ತವಾಗಿ ಒಟ್ಟು 33,746 ಮತಗಟ್ಟೆಗಳನ್ನು ಏರ್ಪಡಿಸಲಾಗಿದೆ. ಮತ ಚಲಾಯಿಸಲು 37,922 ಮತಯಂತ್ರಗಳನ್ನು ಉಪಯೋಗಿಸಲಾಗುವುದು.

You cannot copy contents of this page