ವಿದ್ಯಾರ್ಥಿನಿಯನ್ನು ಚುಡಾಯಿಸಿದ ಯುವಕನಿಗೆ ನಾಗರಿಕರಿಂದ ಶಾಸ್ತಿ: ಪೊಲೀಸರಿಂದ ಲಾಠಿ ಪ್ರಹಾರ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಂತೆ ಬಿಜೆಪಿ ನೇತಾರ ಸಹಿತ ಇಬ್ಬರ ಬಂಧನ

ಕುಂಬಳೆ: ಕಾಲೇಜು ವಿದ್ಯಾರ್ಥಿನಿ ಯನ್ನು ಹಿಂಬಾಲಿಸಿ ಆಕೆಯನ್ನು ಚುಡಾ ಯಿಸಿದ ಯುವಕನನ್ನು ನಾಗರಿಕರು ಸೆರೆಹಿಡಿದು ಶಾಸ್ತಿ ಮಾಡಿದ ಘಟನೆ ನಡೆದಿದೆ. ವಿಷಯ ತಿಳಿದು ತಲುಪಿದ ಪೊಲೀಸರು ತಂಡದ ಮೇಲೆ ಲಾಠಿ ಪ್ರಹಾರ ನಡೆಸಿ ಅವರನ್ನು ಚದುರಿಸಿದ್ದಾರೆ. ಘಟನೆಯ ಕುರಿತು ಸ್ವತಃ ಕೇಸು ದಾಖಲಿಸಿಕೊಂಡ ಪೊಲೀಸರು ಬಿಜೆಪಿ ಕಲ್ಲಿಕೋಟೆ ವಲಯ ಉಪಾಧ್ಯಕ್ಷ ವಿಜಯಕುಮಾರ್ ರೈ (45), ಮಳ್ಳಂಗೈಯ ಪ್ರಜುನಿತ್ (20) ಎಂಬಿ ವರನ್ನು ಬಂಧಿಸಿ ನೋಟೀಸ್ ನೀಡಿ ಬಿಡುಗಡೆಗೊಳಿಸಿದ್ದಾರೆ. ಇತರ ಆರೋ ಪಿಗಳನ್ನು ಶೀಘ್ರ ಬಂಧಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.

ನಿನ್ನೆ ಸಂಜೆ 5.40ರ ವೇಳೆ ಬಂದ್ಯೋಡ್  ಮಳ್ಳಂಗೈಯಲ್ಲಿ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕೆಲಸಕ್ಕೆ ತಲುಪಿದ ವಡಗರ ನಿವಾಸಿಯಾದ ಯುವಕ ಓರ್ವೆ ಕಾಲೇ ಜು ವಿದ್ಯಾರ್ಥಿನಿಯನ್ನು ಹಿಂಬಾಲಿಸಿ ಆಕೆಯನ್ನು ಚುಡಾಯಿಸಿದ್ದನೆಂದು ಹೇಳಲಾಗುತ್ತಿದೆ. ಈ ಕುರಿತು ನಾಗರಿ ಕರು ಹಾಗೂ ವಿದ್ಯಾರ್ಥಿನಿಯ ಸಂಬಂಧಿಕರು ಯುವಕನಿಗೆ ಈ ಹಿಂದೆ ತಾಕೀತು ನೀಡಿದ್ದರು. ಆದರೆ ನಿನ್ನೆ ಸಂಜೆ ಯೂ ಯುವಕ ಮತ್ತೆ ವಿದ್ಯಾರ್ಥಿನಿ ಯನ್ನು ಹಿಂಬಾಲಿಸಿರುವುದಾಗಿ ಹೇಳಲಾಗುತ್ತಿದೆ. ಈ ವಿಷಯ ತಿಳಿದು ತಲುಪಿದ ನಾಗರಿಕರು ಯುವಕನನ್ನು ಸೆರೆಹಿಡಿದು ಹಲ್ಲೆಗೈದಿದ್ದಾರೆ. ಈ ವಿಷಯ ತಿಳಿದು ಹೈವೇ ಪೊಲೀಸರು ಹಾಗೂ ಕುಂಬಳೆ ಪೊಲೀಸರು ಸ್ಥಳಕ್ಕೆ ತಲುಪಿ ಲಾಠಿ ಪ್ರಹಾರ ನಡೆಸಿ ಯುವಕನನ್ನು ತಂಡದಿಂದ ಪಾರು ಮಾಡಿದ್ದಾರೆ. ಘಟನೆ ಬಗ್ಗೆ ಯುವಕ ಹಾಗೂ ವಿದ್ಯಾರ್ಥಿನಿ ಭಾಗದಿಂದ ದೂರು ಲಭಿಸದಿರುವುದರಿಂದ ಕೇಸು ದಾಖಲಿಸಲಿಲ್ಲವೆಂದು ಕುಂಬಳೆ ಪೊಲೀಸರು ತಿಳಿಸಿದ್ದಾರೆ. ಆದರೆ ಪೊಲೀಸರ ನಿರ್ದೇಶವನ್ನು ಅವಗಣಿಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಂತೆ 15 ಮಂದಿ ವಿರುದ್ಧ ಕೇಸು ದಾಖಲಿಸಿ ಕೊಂಡಿರುವುದಾಗಿ ಎಸ್‌ಐ ಕೆ. ಶ್ರೀಜೇಶ್ ತಿಳಿಸಿದ್ದಾರೆ. ವಿಜಯ್ ಕುಮಾರ್ ರೈ ಸಹಿತ ಇಬ್ಬರನ್ನು ಬಂಧಿಸಿ ನೋಟೀಸ್ ನೀಡಿ ಜಾಮೀ ನಿನಲ್ಲಿ ಬಿಡುಗಡೆಗೊಳಿಸಿ ರುವುದಾಗಿ ಅವರು ತಿಳಿಸಿದ್ದಾರೆ.

You cannot copy contents of this page