ಕನ್ನಡ ರಾಜ್ಯೋತ್ಸವದಲ್ಲಿ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ

ಕಾಸರಗೋಡು: ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ನೇತೃತ್ವದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಡಾ. ವಾಣಿಶ್ರೀ ಕಾಸರಗೋಡು ಸಾರಥ್ಯದ ಗಡಿನಾಡ ಕನ್ನಡ ಸಾಹಿತ್ಯಸಾಂಸ್ಕೃತಿಕ ಸಂಸ್ಥೆಯಿಂದ ಸಾಹಿತ್ಯ ಗಾನ ನೃತ್ಯ ವೈಭವ ಕಾರ್ಯಕ್ರಮ ಜರಗಿತು.  ಮಧುಲತಾ ಪುತ್ತೂರು, ದಿವಾಕರ ಕಾಸರಗೋಡು ಅವರಿಂದ ಗಾನ ವೈಭವ ನಡೆಯಿತು. ಡಾ. ವಾಣಿಶ್ರೀ ಪ್ರಸ್ತುತಪಡಿಸಿದರು.  ನೃತ್ಯದಲ್ಲಿ ವಿಶ್ವದಾಖಲೆ ಮಾಡಿದ ಕಲಾವಿದೆ  ರೆಮೋನ ಉದ್ಘಾಟಿಸಿದರು. ಸಂಸ್ಥೆಯ ಕಲಾವಿದರು ವಿವಿಧ ಕಾರ್ಯಕ್ರಮ ಗಳನ್ನು ಪ್ರಸ್ತುತಪಡಿಸಿದರು. ಈ ವೇಳೆ ಭಾಗವಹಿಸಿದ ಕಲಾವಿದರಿಗೆ ರಾಮ ನಾಥ ಸಾಂಸ್ಕೃತಿಕ ಭವನ ಸಮಿತಿಯಿಂದ ಸ್ಮರಣಿಕೆ ನೀಡಿ ಪುರಸ್ಕರಿಸಲಾಯಿತು.  ಡಾ. ವಾಣಿಶ್ರೀ ಯವರನ್ನು ಅಭಿನಂದಿಸ ಲಾಯಿತು. ಕಾರ್ಯಕ್ರಮ ದಲ್ಲಿ ಗುರುಪ್ರಸಾದ್, ಅಚ್ಯುತ ಭಟ್, ವೆಂಕಟ್ರ ಮಣ ಹೊಳ್ಳ, ಸತೀಶ್, ಮೋಹಿನಿ, ವನಿತಾ, ಉಷಾ, ಶಾಂತ, ಅಶ್ವಿನಿ, ಗಿರೀಶ್, ಗೀತಾ ಉಪಸ್ಥಿತರಿದ್ದರು.

You cannot copy contents of this page