ಕಾಸರಗೋಡು: ನಗರಸಭೆಯ ಅಧೀನದಲ್ಲಿರುವ ಅಣಂಗೂರು ಆಯುರ್ವೇದ ಆಸ್ಪತ್ರೆಯಲ್ಲಿ ಲಿಫ್ಟ್ ಸೌಕರ್ಯ ಸಿದ್ಧವಾಗುತ್ತಿದೆ. ಇದರಿಂದಾಗಿ ರೋಗಿಗಳು ಸಹಿತದ ಆಸ್ಪತ್ರೆಗೆ ತಲುಪುವವರಿಗೆ ಮೇಲಿನ ಮಹಡಿಗೆ ಹೋಗಲು ಇರುವ ಸಮಸ್ಯೆಗೆ ಪರಿಹಾರವಾಗಲಿದೆ. ಲಿಫ್ಟ್ ನಿರ್ಮಾಣ ಕಾಮಗಾರಿಯ ಉದ್ಘಾಟ ನೆಯನ್ನು ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ ನಿರ್ವಹಿಸದರು. ಕಾಮಗಾರಿ ಶೀಘ್ರವೇ ಪೂರ್ತಿಗೊಳಿಸಲಾಗುವು ದೆಂದು ಆಸ್ಪತ್ರೆಯಲ್ಲಿ ಇನ್ನಷ್ಟು ಹೆಚ್ಚಿನ ಸೌಕರ್ಯಗಳನ್ನು ಏರ್ಪಡಿಸಲಾಗು ವುದೆಂದು ಅಧ್ಯಕ್ಷರು ಈ ವೇಳೆ ನುಡಿದರು. ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಖಾಲಿದ್ ಪಚ್ಚಕ್ಕಾಡ್ ಅಧ್ಯಕ್ಷತೆ ವಹಿಸಿದರು. ಮುಖ್ಯ ವೈದ್ಯಾಧಿಕಾರಿ ಸ್ವಪ್ನ, ಡಾ| ಮಹೇಶ್, ಡಾ| ಪ್ರಿಯಾ ಹಾಗೂ ಇತರ ನೌಕರರು ಉಪಸ್ಥಿತರಿದ್ದರು.






