ಕುಂಬಳೆ: ಮುಂದಿನ ತಿಂಗಳ 11ರಂದು ನಡೆಯಲಿರುವ ತ್ರಿಸ್ತರ ಪಂಚಾಯತ್ ಚುನಾವಣೆಯಲ್ಲಿ ಕುಂಬಳೆ ಪಂಚಾಯತ್ನ 24 ವಾರ್ಡ್ಗಳಲ್ಲಿ ಮೊದಲ ಹಂತದ 13 ವಾರ್ಡ್ಗಳ ಬಿಜೆಪಿ ಅಭ್ಯರ್ಥಿ ಗಳ ಯಾದಿಯನ್ನು ಕುಂಬಳೆ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಸುನಿಲ್ ಅನಂತಪುರ ಬಿಡುಗಡೆಗೊಳಿಸಿದರು. ಈ ವೇಳೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್, ರಾಜ್ಯ ಸಮಿತಿ ಸದಸ್ಯ ವಿ. ರವೀಂದ್ರನ್, ಕುಂಬಳೆ ಪಂ ಚಾಯತ್ ದಕ್ಷಿಣ ವಲಯ ಅಧ್ಯಕ್ಷ ಸುಜಿತ್ ರೈ, ಉತ್ತರ ವಲಯ ಅಧ್ಯಕ್ಷ ಶಿವಪ್ರಸಾದ್ ರೈ ಮಡ್ವ, ಮಹಿಳಾ ಮೋರ್ಛಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಲತಾ ಎಸ್, ಮಂಡಲ ಉಪಾಧ್ಯಕ್ಷೆ ಪ್ರೇಮಾವತಿ, ಕಾರ್ಯದರ್ಶಿ ಪ್ರದೀಪ ಆರಿಕ್ಕಾಡಿ, ಪಂಚಾಯತ್ ಸಮಿತಿ ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಶೆಟ್ಟಿ, ಬಿ. ವಿಕ್ರಂ ಪೈ, ದಿನೇಶ್ ಕಿದೂರು ಉಪಸ್ಥಿತರಿದ್ದರು.
ಒಂದನೇ ವಾರ್ಡ್ (ಕುಂಬೋಲ್)ನಲ್ಲಿ ಸರೋಜಿನಿ, 5ನೇ ವಾರ್ಡ್ (ಉಜಾರ್)-ಅಮಿತಾ ದೇವದಾಸ್, 6ನೇ ವಾರ್ಡ್ (ಉಳುವಾರ್)-ಮಮತಾ ಎಸ್ ಆಳ್ವ, 11ನೇ ವಾರ್ಡ್(ಮುಜುಂಗಾವು)-ಅಜಿತ್ ಕುಮಾರ್, 12 ವಾರ್ಡ್ (ನಾರಾಯಣಮಂಗಲ)-ಶಾರದಾ, 13ನೇ ವಾರ್ಡ್ (ಪೇರಾಲ್)-ಜಗದೀಶ, 14ನೇ ವಾರ್ಡ್ (ಮಡಿಮುಗರ್)-ಅಶ್ವಿತಾ ಎಸ್, 15ನೇ ವಾರ್ಡ್ (ಮೊಗ್ರಾಲ್)-ಜಯಶ್ರೀ, 18ನೇ ವಾರ್ಡ್ (ಕುಂಬಳೆ ರೈಲ್ವೇ ನಿಲ್ದಾಣ)-ಸುಮಿತ್ರಾ ಗಟ್ಟಿ, 20ನೇ ವಾರ್ಡ್ (ಬದ್ರಿಯಾನಗರ)-ವರುಣ್ ಕುಮಾರ್, 21ನೇ ವಾರ್ಡ್ (ಶಾಂತಿಪಳ್ಳ)-ಪ್ರೇಮಲತಾ ಎಸ್, 22ನೇ ವಾರ್ಡ್(ಮಾಟೆಂಗುಳಿ)-ಉಷಾ ಕುಮಾರಿ, 23ನೇ ವಾರ್ಡ್ (ಕೋಟೆಕಾರು)-ಕಾಂಚಾರ್.ಎ ಎಂಬಿವರು ಸ್ಪರ್ಧಿಸಲಿದ್ದಾರೆ.






