ಕಾಸರಗೋಡು: ಬಾವಿಗೆ ಬಿದ್ದ ವೃದ್ದನನ್ನು ರಕ್ಷಿಸಲು ಇಳಿದ ಉತ್ತರ ಪ್ರದೇಶ ನಿವಾಸಿಯಾದ ಯುವಕ ಕೂಡಾ ಬಾವಿಯೊಳಗೆ ಸಿಲುಕಿಕೊಂಡಿದ್ದು, ಬಳಿಕ ಕಾಸರಗೋಡು ಅಗ್ನಿಶಾಮಕದಳ ತಲುಪಿ ಅವರನ್ನು ಮೇಲೆತ್ತಿ ರಕ್ಷಿಸಿದ ಘಟನೆ ನಡೆದಿದೆ. ನಿನ್ನೆ ಸಂಜೆ ೬.೩೦ರ ವೇಳೆ ತಳಂಗರೆ ಪಳ್ಳಿಕ್ಕಾಲ್‌ನ ಅಬ್ದುಲ್ ರಹ್ಮಾನ್‌ರ ಹಿತ್ತಿಲಲ್ಲಿರುವ ಬಾವಿಗೆ ನೆಲ್ಲಿಕುಂಜೆ ನಿವಾಸಿಯಾದ ಟಿ.ಎಂ. ಮುನೀರ್ (74) ಬಿದ್ದಿದ್ದರು. ೧೫ ಕೋಲು ಆಳವಿರುವ ಬಾವಿಯಲ್ಲಿ 10 ಅಡಿ ನೀರು ತುಂಬಿಕೊಂಡಿದೆ. ಆವರಣಗೋಡೆಯಿಲ್ಲದ ಬಾವಿಗೆ ಮುನೀರ್ ಆಯ ತಪ್ಪಿ ಬಿದ್ದಿದ್ದರೆನ್ನಲಾ ಗಿದೆ. ಅದನ್ನು ಕಂಡ ಉತ್ತರ ಪ್ರದೇಶ ನಿವಾಸಿಯಾದ ಲುಕ್ಮಾನ್ (30) ಕೂಡಲೇ ರಕ್ಷಿಸಲೆಂದು ಬಾವಿಗೆ ಇಳಿದಿ ದ್ದಾರೆ. ನೀರಿನಲ್ಲಿ ಮುಳುಗೇಳುತ್ತಿದ್ದ ಮುನೀರ್‌ರನ್ನು ರಕ್ಷಿಸಲು ನಾಗರಿಕರು ಬಾವಿಗೆ ಹಗ್ಗ ಇಳಿಸಿಕೊಟ್ಟರು. ಮುನೀರ್ ನೀರಿನಲ್ಲಿ ಮುಳುಗದಿರುವಂತೆ ಸುರಕ್ಷಿತವಾಗಿ ಹಿಡಿದು ನಿಲ್ಲಿಸಿದ್ದಾರೆ. ಆದರೂ ಮೇಲಕ್ಕೆತ್ತಲು ಸಾಧ್ಯವಾಗದೆ ಇಬ್ಬರೂ ಬಾವಿಯಲ್ಲಿ ಸಿಲುಕಿಕೊಂ ಡರ. ಇವರನ್ನು ಮೇಲಕ್ಕೆತ್ತಲು ನಾಗರಿಕರು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಇದರಿಂದ ಕಾಸರಗೋಡು ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಲಾಯಿತು. ಅಸಿಸ್ಟೆಂಟ್ ಸ್ಟೇಷನ್ ಆಫೀಸರ್ ಆರ್. ವಿನೋದ್ ಕುಮಾರ್ ಹಾಗೂ ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ವಿ.ಎನ್. ವೇಣುಗೋಪಾಲ್‌ರ ನೇತೃತ್ವದಲ್ಲಿ ಅಗ್ನಿಶಾಮಕ ದಳ ತಲುಪಿ ಬಾವಿಯಲ್ಲಿ ಸಿಲುಕಿಕೊಂಡ ಮುನೀರ್ ರನ್ನು ಬಲೆಯ ಸಹಾಯದಿಂದ ಮೇಲಕ್ಕೆ ತಲುಪಿಸಲಾಯಿತು. ಬಳಿಕ ಲುಕ್ಮಾನ್ ರನ್ನು ಮೇಲೆತ್ತಲಾಯಿತು. ಅಗ್ನಿಶಾಮಕದಳ ಸಿಬ್ಬಂದಿಗಳಾದ ಎಂ. ರಮೇಶ, ಕೆ.ಆರ್. ಅಜೇಶ್, ಎ.ಜೆ. ಅಭಯ್‌ಸೆನ್, ಎಸ್. ಅಭಿಲಾಷ್, ಪಿ.ಸಿ. ಮೊಹಮ್ಮದ್ ಸಿರಾಜುದ್ದೀನ್, ಟಿ. ಅಮಲ್‌ರಾಜ್, ಫಯರ್ ವುಮನ್ ಕೆ. ಶ್ರೀಜಿಶ, ಹೋಂಗಾರ್ಡ್ ಎನ್.ಪಿ. ರಾಕೇಶ್ ಎಂಬಿವರು ಕಾರ್ಯಾಚರಣೆ ತಂಡದಲ್ಲಿದ್ದರು.






