ಕಾಸರಗೋಡು: ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ತಳಂಗರೆ ಹೊಳೆಯಲ್ಲಿ ನಿನ್ನೆಸಂಜೆ ಪತ್ತೆಯಾಗಿದೆ. ಕೋಟಿಕುಳಂ ಬೈಕೆ ಮಸೀದಿ ಬಳಿಯ ಮುಕ್ರಿ ಹೌಸ್‌ನ ಹಾಶಿಂ (55) ಸಾವನ್ನಪ್ಪಿದ ವ್ಯಕ್ತಿ. ಇವರು ಸೋಮವಾರ ಬೆಳಿಗ್ಗೆ ನಮಾಜ್‌ಗಾಗಿ ಎಂದಿನಂತೆ ಕೋಟಿಕುಳಂನ ಮಸೀದಿಗೆ ಹೋಗಿದ್ದರು. ಸಂಜೆಯಾ ದರೂ ಮನೆಗೆ ಹಿಂತಿರುಗದಾಗ ಮನೆಯವರು ಬಳಿಕ ಆ ಬಗ್ಗೆ ಬೇಕಲ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿರುವಂ ತೆಯೇ ಹಾಶಿಂರ ಮೃತದೇಹ ತಳಂಗರೆ ಕಡವತ್‌ನ ಹೊಳೆಯಲ್ಲಿ ನಿನ್ನೆ ಸಂಜೆ ಪತ್ತೆಯಾಗಿದೆ. ಮೃತದೇಹವನ್ನು ಬಳಿಕ ಜನರಲ್ ಆಸ್ಪತ್ರೆಗೆ ಸಾಗಿಸಿ ಮರಣೋ ತ್ತರ ಪರೀಕ್ಷೆ ಒಳಪಡಿಸಲಾಯಿತು.
ವರ್ಷಗಳ ತನಕ ವಿದೇಶದಲ್ಲಿ ವಯರಿಂಗ್, ಪ್ಲಂಬಿಂಗ್ ಕಾರ್ಮಿಕ ನಾಗಿ ದುಡಿಯುತ್ತಿದ್ದ ಹಾಶಿಂ ಬಳಿಕ ಕೆಲಸ ಬಿಟ್ಟು ಊರಿಗೆ ಹಿಂತಿರುಗಿದ್ದರು.
ಮೂಸಾ-ಆಯಿಷಾ ದಂಪತಿ ಪುತ್ರನಾಗಿರುವ ಮೃತರು ಪತ್ನಿ ಶಫರುನ್ನೀಸಾ, ಮಕ್ಕಳಾದ ಸಾಬಿತ್, ರಾಶೀದ್, ಶರ್ಮಿಳಾ, ಫಾತಿಮಾ, ಮೊಹಮ್ಮದ್ ಶಾಹಿನ್‌ಶಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.





