ಬದಿಯಡ್ಕ: ಮಿಠಾಯಿ ಖರೀದಿಸಲು ಅಂಗಡಿಗೆ ಬಂದ 10ರ ಹರೆಯದ ಬಾಲಕಿಗೆ ಕಿರುಕುಳ ನೀಡಲೆತ್ನಿಸಿದ ಬಗ್ಗೆ ದೂರಲಾಗಿದೆ. ಈ ಸಂಬಂಧ ಅಂಗಡಿ ಮಾಲಕನನ್ನು ಪೋಕ್ಸೋ ಪ್ರಕಾರ ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಕುಂಬ್ಡಾಜೆ ತುಪ್ಪೆಕಲ್ಲು ನಿವಾಸಿಯಾದ ಅಬ್ದುಲ್ಲ (64) ಸೆರೆಗೀಡಾದ ವ್ಯಕ್ತಿಯಾಗಿದ್ದಾನೆ. ಈತನಿಗೆ ನ್ಯಾಯಾಲಯ ಎರಡು ವಾರಗಳ ರಿಮಾಂಡ್ ವಿಧಿಸಿದೆ. ಇತ್ತೀಚೆಗೆ ಓರ್ವ ಬಾಲಕಿ ಅಂಗಡಿಗೆ ಬಂದಿದ್ದಾಗ ಆರೋಪಿ ಕಿರುಕುಳ ನೀಡಲೆತ್ನಿಸಿರುವುದಾಗಿ ದೂರಲಾಗಿದೆ. ಘಟನೆ ಬಗ್ಗೆ ಬಾಲಕಿ ಮನೆಯವರಲ್ಲಿ ವಿಷಯ ತಿಳಿಸಿದ್ದು ಬಳಿಕ ಬದಿಯಡ್ಕ ಪೊಲೀಸರಿಗೆ ದೂರು ನೀಡಲಾಗಿತ್ತು.





