ದೇಲಂತೊಟ್ಟು ಬಜೆ ಶ್ರೀ ಕ್ಷೇತ್ರದಲ್ಲಿ ಕಾರ್ತಿಕ ದೀಪೋತ್ಸವ 21ರಂದು ಸಮಾಪ್ತಿ: ವಿವಿಧ ಕಾರ್ಯಕ್ರಮ

ಹೇರೂರು: ದೇಲಂತೊಟ್ಟು ಬಜೆ ಶ್ರೀ ಮಹಾವಿಷ್ಣು ದೇವಸ್ಥಾನ ದಲ್ಲಿ ಒಂದು ತಿಂಗಳ ಕಾಲ ನಡೆಯುತ್ತಿರುವ ವಿಶೇಷ ಕಾರ್ತಿಕ ದೀಪೋತ್ಸವ ಈ ತಿಂಗಳ 21ರಂದು ಸಮಾಪ್ತಿಗೊಳ್ಳಲಿದ್ದು, ಸಾಂಸ್ಕöÈತಿಕ ಕಾರ್ಯಕ್ರಮದ ಅಂಗವಾಗಿ ಅದೇ ದಿನ ಸಂಜೆ 7ರಿಂದ ಕಲಾರತ್ನ ಶಂನಾಡಿಗ ಕುಂಬಳೆ ಇವರಿಂದ ಭಕ್ತ ಪ್ರಹ್ಲಾದ ಹರಿಕಥಾ ಸತ್ಸಂಗ ಹಾಗೂ ರಾತ್ರಿ 8.30ರಿಂದ ಗಡಿನಾಡ ಸಾಂಸ್ಕöÈತಿಕ ಕಲಾ ವೇದಿಕೆ ಕಾಸರಗೋಡು ಇವರಿಂದ ಸಾಂಸ್ಕöÈ ತಿಕ ಕಲಾ ವೈಭವ ನಡೆಯಲಿದೆ. ಪ್ರತಿ ದಿನ ಸಂಜೆ 5.30ರಿಂದ ವಿವಿಧ ತಂಡಗಳಿAದ ಹರಿನಾಮ ಕೀರ್ತನೆ, ರಾತ್ರಿ 7ರಿಂದ ಸಾಮೂಹಿಕ ವಿಷ್ಣು ಸಹಸ್ರ ನಾಮ ಪಾರಾಯಣ, 8ಗಂಟೆಗೆ ಮಹಾಪೂಜೆ, 8.30ರಿಂದ ಅನ್ನ ಸಂತರ್ಪಣೆ ನಡೆಯುತ್ತಿದೆ.

You cannot copy contents of this page