ಉಪ್ಪಳ: ಸ್ಥಳೀಯಾಡಳಿತ ಚುನಾವಣೆ ಡಿ.11ರಂದು ನಡೆಯಲಿ ರುವಂತೆ ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ವಿವಿಧ ವಾರ್ಡ್ಗಳಲ್ಲಿ ಅಭಿವೃದ್ದಿ ಕಾಮಗಾರಿ ನಡೆಯುತ್ತಿದೆ. 7ನೇ ವಾರ್ಡ್ ಪ್ರತಾಪನಗರದಲ್ಲಿ ಹಲವಾರು ರಸ್ತೆಗಳ ಅಭಿವೃದ್ದಿ ಕಾಮಗಾರಿ ಬಿರುಸಿನಿಂದ ನಡೆಯುತ್ತಿದೆ. ನಾಲ್ಕು ಲಕ್ಷ ರೂ. ವೆಚ್ಚದಲ್ಲಿ ಸೋಂಕಾಲು ಪ್ರತಾಪನಗರ ರಸ್ತೆ 73 ಮೀಟರ್ ಕಾಂಕ್ರೀಟ್, ಸಮೀಪದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಚರಂಡಿ ನಿರ್ಮಾಣ ಹಾಗೂ ಪುಳಿಕುತ್ತಿ ಸೋಂಕಾಲು ಕ್ರಾಸ್ ರಸ್ತೆಯ 85 ಮೀಟರ್ ಐದು ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್, ಗುಳಿಗ ಬನ ಪರಿಸರದಲ್ಲಿ ಚರಂಡಿ ನಿರ್ಮಾಣ ಹಾಗೂ ಸ್ಮಾರ್ಟ್ ಅಂಗನವಾಡಿಯ ಕಾಮಗಾರಿ ಬಿರುಸಿನಿಂದ ನಡೆಯುತ್ತಿದೆ. ಈ ರಸ್ತೆಯ ಪೈಕಿ ಪುಳಿಕುತ್ತಿ-ಸೋಂಕಾಲು ಕ್ರಾಸ್ ರಸ್ತೆ ನಿರ್ಮಾಣದಿಂದ ಈ ಪ್ರದೇಶದ ಸುಮಾರು ಎಂಟು ಕುಟುಂಬಗಳಿಗೆ ಸಂಚಾರ ಸಮಸ್ಯೆ ದೂರವಾಗಲಿದೆ. ಈ ರಸ್ತೆ ನಿರ್ಮಾಣದಿಂದ ಸಂಚಾರ ಸುಗಮವಾಗಲಿದೆ. ಬಿಜೆಪಿ ಪಂ. ಸದಸ್ಯೆ ಸುಧಾ ಗಣೇಶ್ರ ಪ್ರಯತ್ನದಿಂದ ಈ ರಸ್ತೆ ನಿರ್ಮಾಣಗೊಂಡಿದ್ದು, ಸ್ಥಳೀಯರು ಅಭಿನಂದನೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮಂಗಲ್ಪಾಡಿ ಬಯಲು, ಅಂಬೇಡ್ಕರ್ ಕೃಷ್ಣ ನಗರ ಕಾಲನಿ, ಬೀಟಿಗದ್ದೆ ತಿಂಬರ, ಪ್ರತಾಪನಗರ ಮಸೀದಿ, ಪುಳಿಕುತ್ತಿ ಪ್ರತಾಪನಗರ ರಸ್ತೆಗಳ ಅಭಿವೃದ್ದಿ ಹಾಗೂ ಇತರ ಹಲವು ಕೆಲಸಗಳು ಈ ಹಿಂದೆಯೇ ನಡೆದಿದೆ.







