ಕುಂಬಳೆ: ಪಂಚಾಯತ್‌ನಿಂದ ಸ್ಪರ್ಧಿಸುವ ಎಸ್‌ಡಿಪಿಐ ಅಭ್ಯರ್ಥಿಗಳ ಮೊದಲ ಹಂತದ ಯಾದಿಯನ್ನು ಕುಂಬಳೆಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮುಖಂಡರು ಬಿಡುಗಡೆಗೊಳಿಸಿದರು. ವಾರ್ಡ್ 1 ಕುಂಬೋಳ್‌ನಲ್ಲಿ ರುಖಿಯ ಅನ್ವರ್, ಕಕ್ಕಳಂಕುನ್ (3)ನಲ್ಲಿ ನಾಸರ್ ಬಂಬ್ರಾಣ, ರೈಲ್ವೇ ಸ್ಟೇಷನ್ (18)- ಫಹೀಮ ನೌಷಾದ್, ಬದ್ರಿಯಾನಗರ್ (20)- ಅನ್ವರ್ ಆರಿಕ್ಕಾಡಿ ಸ್ಪರ್ಧಿಸುವರು. ಈ ಬಗ್ಗೆ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಖಾದರ್ ಅರಫ, ಮಂಜೇಶ್ವರ ಮಂಡಲ ಕಾರ್ಯದರ್ಶಿ ಶಬೀರ್, ಕುಂಬಳೆ ಪಂ. ಕಾರ್ಯದರ್ಶಿ ಶಾನಿಫ್ ಮೊಗ್ರಾಲ್, ಕೋಶಾಧಿಕಾರಿ ನೌಶಾದ್ ಮನ್ಸೂರ್ ಭಾಗವಹಿಸಿದರು.







