ಸ್ಥಳೀಯಾಡಳಿತ ಚುನಾವಣೆಗೆ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿ ಬಿಡುಗಡೆ

ಕಾಸರಗೋಡು: ದಶಂಬರ್ 11ರಂದು ನಡೆಯಲಿರುವ ಸ್ಥಳೀಯಾಡಳಿತ ಚುನಾವಣೆಗೆ ಪಂಚಾಯತ್ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಪ್ರಕಟಿಸಿದೆ. ಮೊದಲ ಹಂತದ ಯಾದಿಯನ್ನು ವಿವಿಧ ಪಂಚಾಯತ್ಗಳಲ್ಲಿ ಪ್ರಕಟಿಸಲಾಗಿದೆ. ಕಾಸರಗೋಡು ನಗರಸಭೆ, ಮಧೂರು, ಮೊಗ್ರಾಲ್ ಪುತ್ತೂರು, ಮಡಿಕೈ, ಮೀಂಜ, ವರ್ಕಾಡಿ, ಅಜಾನೂರು, ಬದಿಯಡ್ಕ, ತೃಕರಿಪುರ, ಪಡನ್ನ, ಪಿಲಿಕ್ಕೋಡ್, ಈಸ್ಟ್ ಎಳೇರಿ, ವೆಸ್ಟ್ ಎಳೇರಿ, ಕಿನಾನೂರು ಕರಿಂದಳ ಮೊದಲಾದ ಪಂಚಾಯತ್ ಹಾಗೂ ನೀಲೇಶ್ವರ ನಗರಸಭೆಗಳ ಸ್ಪರ್ಧಾಳುಗಳ ಹೆಸರನ್ನು ಪ್ರಕಟಿಸಲಾಗಿದೆ.
ಮೀಂಜ ಪಂಚಾಯತ್ ಹಾಗೂ ವರ್ಕಾಡಿ ಪಂಚಾಯತ್ನಲ್ಲಿ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿಗಳ ಪ್ರಥಮ ಹಂತದ ಯಾದಿಯನ್ನು ಬಿಜೆಪಿ ಜಿಲ್ಲಾಧ್ಯಕ್ಷರ ಒಪ್ಪಿಗೆ ಬಳಿಕ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ. ಬಿಡುಗಡೆ ಮಾಡಿದರು. 1ನೇ ವಾರ್ಡ್ ಗಾಂಧಿನಗರದಿAದ ದಿವ್ಯ ಕುಮಾರಿ, 1- ಮಜೀರ್ಪಳ್ಳ- ಸಂತೋಷ ಶೆಟ್ಟಿ, 3- ಕಳಿಯೂರು- ಶಾಂತ ಕುಲಾಲ್, 4- ಮೀಂಜ- ಗಣೇಶ ಸಪಲ್ಯ, 6- ಅರಿಯಾಳ- ಶಾಲಿನಿ ಶೆಟ್ಟಿ, 7- ಚಿಗುರುಪಾದೆ- ಚಂದ್ರಶೇಖರ ಕೋಡಿ, 8- ಬಾಳಿಯೂರು- ರಮ್ಯ ಸಂಕಪ್ಪ ಭಂಡಾರಿ, 10- ಮೂಡಂಬೈಲು- ಲೀಲಾವತಿ, 11- ಪಟ್ಟತ್ತೂರು- ಆಶಾಲತಾ ಬಿ.ಎಂ, 14- ಬೆಜ್ಜ- ಸಂಧ್ಯಾ ಎಸ್. ಭಂಡಾರಿ, 15- ತಲೇಕಳ- ನಾರಾಯಣ ಸಿ, 17- ಕಳಿಯೂರು- ಭಾರತಿ.
ವರ್ಕಾಡಿ: ಪಾವೂರು (1)- ಜಯಾನಂದ, ಮುಡಿಮಾರ್ (2) -ಹರೀಶ್ ನಾಯ್ಕ್, ಕೆದುಂಬಾಡಿ (3)- ಪವಿತ್ರಾ ಪಿ, ಪಾವಳ (5)- ಉಷಾ, ಪೊಯ್ಯತ್ತಬೈಲ್ (6)- ಉದಯಕುಮಾರ್ ಪೂಜಾರಿ, ಸುಳ್ಯಮೆ (7)- ಮಮತಾ, ತಲೆಕ್ಕಿ (9)- ಸುಖಿರಾಜ್ ಶೆಟ್ಟಿ, ಸೊಡಂಕೂರು (10)- ಸುರೇಶ್ ಶೆಟ್ಟಿ, ಬದಿಯಾರ್ (13)- ಪದ್ಮಾವತಿ, ವರ್ಕಾಡಿ (15)- ಚಂದ್ರಶೇಖರ್, ನಲ್ಲೆಂಗಿ (16)- ತುಳಸಿ ಕುಮಾರಿ, ಪೊಯ್ಯೆ (17)- ಆನಂದ ಟಿ, ಅರಿಬೈಲ್ (18)- ಉಮೇಶ್ ಎ.
ಮಧೂರು: ಸುಜ್ಞಾನಿ ಶ್ಯಾನುಭೋಗ್ (ಕೊಲ್ಯ), ಸುಜಾತ ಕಿಶೋರ್ (ಕೊಲ್ಲಂಗಾನ), ಎಂ.ಆರ್. ಯೋಗೇಶ್ (ಮಧೂರು), ಕೆ.ಕೆ. ಅನಿಲ್ ಕುಮಾರ್ (ಉದಯಗಿರಿ), ಮಾಧವ ಮಾಸ್ಟರ್ (ಕೋಟೆಕಣಿ), ಗಣೇಶ್ ಪ್ರಸಾದ್ (ಮೀಪುಗುರಿ), ಎನ್. ಲತಾ (ಚೂರಿ), ಕೆ. ದೀಪ್ತಿ (ಸೂರ್ಲು), ವಸಂತ (ಕೇಳುಗುಡ್ಡೆ), ಭಾನುಪ್ರಕಾಶ್ (ಕಾಳ್ಯಂಗಾಡ್), ಪುಷ್ಪಾ ಗೋಪಾಲನ್ (ರಾಮ್ದಾಸ್ ನಗರ), ರತೀಶ್ ಎಂ. (ಮನ್ನಿಪ್ಪಾಡಿ), ಪಿ.ಬಿ. ಚಂದ್ರ (ಭಗವತೀನಗರ್), ನವನೀತ್ ಶೆಟ್ಟಿ (ಶಿರಿಬಾಗಿಲು).
ಮೊಗ್ರಾಲ್ ಪುತ್ತೂರು: ಸರೋಜಿನಿ (ಉಜಿರೆಕೆರೆ ಮಜಲ್), ವಸಂತಿ (ಪೆರ್ನಡ್ಕ ಪಾಯಿಚ್ಚಾಲ್), ಶ್ರೀವಿದ್ಯಾ (ಗುವೆತ್ತಡ್ಕ), ಪ್ರಮೀಳಾ ಮಜಲ್ (ಕೇಳುಗುಡ್ಡೆ ಬಳ್ಳಿಮೊಗರು), ಮಲ್ಲಿಕಾಪ್ರಭಾಕರನ್ (ಚೌಕಿ ಕಡಪ್ಪುರಂ).
ಕಾಸರಗೋಡು ನಗರಸಭೆ: ಸವಿತಾ ಟೀಚರ್ (ವಿದ್ಯಾನಗರ), ಚೇತನ್ ಬಿ. (ಅಡ್ಕತ್ತಬೈಲು), ರವೀಂದ್ರ ಪೂಜಾರಿ (ಆನೆಬಾಗಿಲು), ಕೆ.ಎಸ್. ಶ್ರುತಿ (ಕೋಟೆಕಣಿ), ಬಿ. ಶಾರದಾ (ನುಳ್ಳಿಪ್ಪಾಡಿ ನೋರ್ತ್), ಸುಧಾರಾಣಿ (ಅಣಂಗೂರು), ರಾಜೇಶ್ ಅಮೈ (ಪಿಲಿಕುಂಜೆ), ಅರುಣ್ ಕುಮಾರ್ ಶೆಟ್ಟಿ (ಬೀರಂತಬೈಲು), ರೇಷ್ಮಾ (ಕಡಪ್ಪುರಂ ನೋರ್ತ್), ಕೆ.ಜಿ. ಮನೋಹರನ್ (ಲೈಟ್ಹೌಸ್).
ಕಾಸರಗೋಡು ನಗರಸಭೆಯ ಯಾದಿಯನ್ನು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಸಿ.ಕೆ. ಪದ್ಮನಾಭನ್ ಬಿಡುಗಡೆಗೊಳಿಸಿದ್ದಾರೆ. ಈ ವೇಳೆ ಮುಖಂಡರಾದ ಕೆ. ಸಜೀವನ್, ಎಂ.ಎಲ್. ಅಶ್ವಿನಿ, ಪಿ. ರಮೇಶ್, ಪಿ.ಆರ್. ಸುನಿಲ್ ಉಪಸ್ಥಿತರಿದ್ದರು.

ಬದಿಯಡ್ಕ ಪಂಚಾಯತ್ ಬಿಜೆಪಿ ಅಭ್ಯರ್ಥಿಗಳ ಯಾದಿ ಬಿಡುಗಡೆ
ಬದಿಯಡ್ಕ: ಬದಿಯಡ್ಕ ಪಂಚಾಯತ್ನಿAದ ಬಿಜೆಪಿ ಅಭ್ಯರ್ಥಿಗಳಾಗಿ ಸ್ಪರ್ಧಿಸುವವರ ಹೆಸರನ್ನು ಘೋಷಿಸಲಾಗಿದೆ. ವಾರ್ಡ್ನಂಬ್ರ 2 (ಕಿಳಿಂಗಾರು)ರಿAದ ಡಿ. ಶಂಕರ, 3 (ನೀರ್ಚಾಲು) ಶ್ಯಾಂ ಪ್ರಸಾದ್ ಸರಳಿ, 5 (ಮೂಕಂಪಾರೆ) ಸುನಿಲ್ ಕಿನ್ನಿಮಾಣಿ, 6 (ಕಾಡಮನೆ) ಅವಿನಾಶ್ ರೈ, 7 (ಪಳ್ಳತ್ತಡ್ಕ) ಜಯಂತಿ ಕುಂಟಿಕಾನ, 8 (ಮೆಡಿಕಲ್ ಕಾಲೇಜು) ಉಷಾ ಕೆ, 9 (ಚಾಲಕ್ಕೋಡು) ಮಧುಸೂದನ, 10 (ವಿದ್ಯಾಗಿರಿ) ಬಾಲಕೃಷ್ಣ ಶೆಟ್ಟಿ, 11 (ಬಾರಡ್ಕ) ಜಗದಂಬಾ, 12 (ಬದಿಯಡ್ಕ) ಸುರೇಖಾ, 14 (ಕನ್ಯಪ್ಪಾಡಿ) ಆನಂದ ಕೆ, 16 (ಚರ್ಲಡ್ಕ) ತುಳಸಿ, 18 (ಪುದುಕೋಳಿ) ರಜನಿ ಸಂದೀಪ್, 20 (ಬೇಳ) ಪ್ರೇಮಕುಮಾರಿ, 21 (ಸೀತಾಂಗೋಳಿ) ರೋಮನ್ ಡಿ’ಸೋಜಾ. ಇವರ ಹೆಸರನ್ನು ಮಂಡಲ ಕಮಿಟಿ ಅಧ್ಯಕ್ಷ ಗೋಪಾಲಕೃಷ್ಣ ಮುಂಡೋಳುಮೂಲೆ ಪ್ರಕಟಿಸಿದ್ದಾರೆ.

You cannot copy contents of this page