ಸ್ವಾತಂತ್ರ್ಯ ಚಳವಳಿಗೆ, ಸಂವಿಧಾನ ನಿರ್ಮಾಣಕ್ಕೆ ವಿವೇಕಾನಂದರು ಪ್ರೇರಣೆ-ಕರುಣಾಕರನ್ ನಂಬ್ಯಾರ್

ಕಾಸರಗೋಡು: ಸ್ವಾಮಿ ವಿವೇಕಾನಂದರು ಭಾರತದ ಸ್ವಾತಂತ್ರ್ಯ ಚಳವಳಿ ಹಾಗೂ ಸಂವಿಧಾನ ನಿರ್ಮಾಣದಲ್ಲಿ  ಕ್ರಿಯಾತ್ಮಕವಾಗಿ ಸ್ವಾಧೀನಿಸಿದ್ದ ವ್ಯಕ್ತಿಯೆಂದು ಭಾರತೀಯ ಅಭಿಭಾಷಕ ಪರಿಷತ್ ರಾಜ್ಯ ಸಮಿತಿ ಸದಸ್ಯ ನ್ಯಾಯವಾದಿ ಕರುಣಾಕರನ್ ನಂಬ್ಯಾರ್ ಅಭಿಪ್ರಾಯಪಟ್ಟರು. ಭಾರತೀಯ ಅಭಿಭಾಷಕ ಪರಿಷತ್ ಆಶ್ರಯದಲ್ಲಿ ಕಾಸರಗೋಡು ಕೋ-ಆಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ವಿವೇಕಾನಂದ ಜಯಂತಿ  ಆಚರಣೆಯಲ್ಲಿ ಅವರು  ಪ್ರಧಾನ ಭಾಷಣ ಮಾಡಿದರು.   ವಿವೇಕಾನಂದರು ಭಾರತೀಯ ಯುವತ್ವದ ಮಾದರಿಯಾಗಿ ದ್ದಾರೆಂದು ಅವರು ನುಡಿದರು.  ಕಾರ್ಯಕ್ರಮವನ್ನು ಅಭಿಭಾಷಕ ಪರಿಷತ್ ರಾಜ್ಯ ಉಪಾಧ್ಯಕ್ಷ ನ್ಯಾಯವಾದಿ ಬಿ. ರವೀಂದ್ರನ್ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ನ್ಯಾಯವಾದಿ ಎ.ಸಿ. ಅಶೋಕ ಕುಮಾರ್ ಅಧ್ಯಕ್ಷತೆ ವಹಿಸಿದರು.  ಜಿಲ್ಲಾ ಕಾರ್ಯದರ್ಶಿ ನ್ಯಾಯವಾದಿ ಪಿ. ಮುರಳೀಧರನ್ ಸ್ವಾಗತಿಸಿ, ಹೊಸದುರ್ಗ ಘಟಕಾಧ್ಯಕ್ಷ ನ್ಯಾಯ ವಾದಿ ಅನಿಲ್ ಕೆ.ಜಿ ವಂದಿಸಿದರು.

RELATED NEWS

You cannot copy contents of this page