ಕಾಸರಗೋಡು: ವಾಹನ ತಪಾಸಣೆ ನಡೆಸಿ ಠಾಣೆಗೆ ಮರಳುತ್ತಿದ್ದ ಪೊಲೀಸ್ ಜೀಪು ಅಪಘಾತಕ್ಕೀಡಾಗಿದೆ. ರಾಜಪುರಂ ಠಾಣೆಯ ವಾಹನ ನಿನ್ನೆ ರಾತ್ರಿ 9 ಗಂಟೆಗೆ ಮುಂಡೋಟ್ ಸೈಂಟ್ ಫಯಸ್ ಕಾಲೇಜು ಮುಂಭಾಗ ಅಪಘಾತ ಸಂಭವಿಸಿದೆ. ನಿಯಂತ್ರಣ ತಪ್ಪಿದ ಜೀಪು ಮೋರಿ ಸಂಕಕ್ಕೆ ಢಿಕ್ಕಿ ಹೊಡೆದ ಬಳಿಕ ರೋಡಿಗೆ ಮಗುಚಿ ಬಿದ್ದಿದೆ. ವಾಹನದಲ್ಲಿ ಸಿಐಪಿ ಪ್ರದೀಪ್ ಕುಮಾರ್, ಎಎಸ್‌ಐ ಮೋನ್ಸ್ ಎಂಬಿವರಿದ್ದರು. ಇವರು ಅದೃಷ್ಟವಶಾತ್ ಗಾಯಗಳಿಲ್ಲದೆ ಪಾರಾಗಿದ್ದಾರೆ.







