ಹೊಸದುರ್ಗ: ಹಿರಿಯ ಸಿಪಿಐ ನೇತಾರ, ಪೂರಕ್ಕಳಿ ಕಲಾವಿದ ವೆಳ್ಳೂರಿನ ಪಿ. ನಾರಾಯಣನ್ (83) ನಿಧನ ಹೊಂದಿ ದರು. ಪೂರಕ್ಕಳಿ ಕಲಾವಿದ, ಹಾಡುಗಾರ, ತರಬೇತುದಾರ, ಸಂಸ್ಕೃತ ಪಂಡಿತ, ನಾಟಕ ನಟ, ಕೃಷಿಕ, ಲೇಖಕ ಮೊದಲಾದ ರಂಗಗಳಲ್ಲಿ ಇವರು ಗುರುತಿಸಿಕೊಂಡಿದ್ದರು. ಶಾಲಾ ಯುವಜ ನೋತ್ಸವಗಳಲ್ಲಿ ಪೂರಕ್ಕಳಿ ಯನ್ನು ಸ್ಪರ್ಧೆಯಾಗಿ ಘೋಷಿಸಿರುವುದು ಇವರ ನೇತೃತ್ವದಲ್ಲಿದ್ದ ಪೂರಕ್ಕಳಿ ಅಕಾಡೆಮಿ ಯಾಗಿತ್ತು. ಕೇರಳ ಜಾನಪದ ಅಕಾಡೆ ಮಿಯ ಪೂರಕ್ಕಳಿಗಿರುವ ಪುರಸ್ಕಾರ ಮೊದಲ ಬಾರಿಗೆ ಲಭಿಸಿರುವುದು ಇವರಿಗಾಗಿತ್ತು. ಇವರ ಪತ್ನಿ ಟಿ. ನಾರಾಯಣಿ ಈ ಹಿಂದೆ ನಿಧನರಾಗಿ ದ್ದಾರೆ. ಮೃತರು ಮಕ್ಕಳಾದ ಟಿ. ಅಜಿತ, ಸಂತೋಷ್ ಕುಮಾರ್, ವಿನೋದ್ ಕುಮಾರ್, ಸಜಿನ, ಸಹೋದರ- ಸಹೋದರಿಯರಾದ ಕಾರ್ತ್ಯಾಯಿನಿ, ದಾಮೋದರನ್, ಬಾಬು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.







