ಪೈವಳಿಕೆ: ಚೇವಾರು ಶ್ರೀ ಶಾರದಾ ಎಯುಪಿ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ ಜರಗಿತು. ಪಿಟಿಎ ಅಧ್ಯಕ್ಷ ಅಬ್ದುಲ್ ಅಸೀಸ್ ಚೇವಾರು ಉದ್ಘಾಟಿಸಿದರು. ಮುಖ್ಯೋಪಾಧ್ಯಾಯ ಶ್ಯಾಮ್ ಭಟ್ ಅಧ್ಯಕ್ಷತೆ ವಹಿಸಿದರು. ಶಿಕ್ಷಕಿ ರಾಜೇಶ್ವರಿ ಶುಭ ಕೋರಿದರು. ಉಪಜಿಲ್ಲಾ ಮಟ್ಟದ ವಿದ್ಯಾರಂಗ, ವಿಜ್ಞಾನೋತ್ಸವ, ಕ್ರೀಡಾಕೂಟ , ಕಲೋತ್ಸವಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ, ಟ್ರೋಫಿ, ಪ್ರಶಸ್ತಿ ಪತ್ರ ವಿತರಿಸಲಾಯಿತು. ರವಿಕುಮಾರ್ ಸ್ವಾಗತಿಸಿ, ಪ್ರಸಾದ್ ರೈ ವಂದಿಸಿದರು. ರಾಜೇಶ್ವರಿ ಟೀಚರ್ ಸಿಹಿ ಹಂಚಿಸಿದರು. ಪ್ರಮೀಳಾ ಡಿ.ಎನ್., ಗೀತಾಂಜಲಿ, ಸಾತ್ವಿಕ್ ಎನ್., ಹಾರೀಸ್ ಟಿ., ಫಾಯಸ್, ಕವಿತಾ, ಶಾಮಿನಿ ಸಹಕರಿಸಿದರು.
ಮೀಂಜ: ಕುಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಛದ್ಮವೇಷ ಸ್ಪರ್ಧೆ ಏರ್ಪಡಿಸ ಲಾಗಿತ್ತು. ಸಭಾ ಕಾರ್ಯಕ್ರಮವನ್ನು ನಿವೃತ್ತ ಮುಖ್ಯೋಪಾಧ್ಯಾಯ ಸತ್ಯನಾ ರಾಯಣ ಶರ್ಮ ಉದ್ಘಾಟಿಸಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಹಮ್ಮದ್ ಹಾಜಿ ಕಂಚಿಲ ಅಧ್ಯಕ್ಷತೆ ವಹಿಸಿದರು. ಮುಖ್ಯೋಪಾಧ್ಯಾಯಿನಿ ಮಾಲತಿ ಪ್ರಸ್ತಾಪಿಸಿದರು. ಶಾಲಾ ಅಭಿವೃದ್ಧಿ ಸಮಿತಿ ಸದಸ್ಯ

ಚಂದ್ರಹಾಸ ಶೆಟ್ಟಿ ಕುಳೂರು, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಪೊಯ್ಯೆಲು, ಹಳೆ ವಿದ್ಯಾರ್ಥಿ ಜನಾರ್ದನ ಪೂಜಾರಿ ಕುಳೂರು, ಜಯರಾಜ್ ಸಿ. ಶೆಟ್ಟಿ ಚಾರ್ಲ, ಕವಿತಾ ದೇರಂಬಳ, ಪ್ರಿಯಾಂಕ ಕೆಮ್ಮಜಲ್ ಶುಭ ಹಾರೈಸಿದರು. ಇದೇ ವೇಳೆ ಶಾಲೆಯ ಅಭಿವೃದ್ಧಿ ಕಾರ್ಯಗಳನ್ನು ನೆರವೇರಿಸಲು ಸಹಕರಿಸಿದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಯರಾಜ್ ಸಿ. ಶೆಟ್ಟಿ ಚಾರ್ಲರನ್ನು ಶಿಕ್ಷಕ ವೃಂದದ ಪರವಾಗಿ ಗೌರವಿಸ ಲಾಯಿತು. ವಿವಿಧ ಸ್ಪರ್ಧಾ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾ ಯಿತು. ಶ್ವೇತಾ ಇ., ಅಶ್ವಿನಿ ಎಂ., ವಸಂತ ಪೂಜಾರಿ ಕುಳೂರು, ನಯನಾ ಎಂ., ಸೌಮ್ಯ ಪಿ. ಭಾಗವಹಿಸಿದರು. ಕಿರು ನಾಟಕ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು. ಛದ್ಮವೇಷ ಸ್ಪರ್ಧೆಗೆ ಭಾಸ್ಕರ ಶೆಟ್ಟಿಗಾರ್, ವಿಜಯ ಕುಮಾರ್, ನಾಗರಾಜ್ ತೀರ್ಪುಗಾರರಾಗಿ ಸಹಕರಿಸಿದರು.







