ಕುಂಬಳೆ: ಕೇರಳ ಇಲೆಕ್ಟ್ರಿಕಲ್ ವಯರ್‌ಮ್ಯಾನ್ ಆಂಡ್ ಸೂಪರ್‌ವೈಸರ್ಸ್ ಅಸೋಸಿಯೇಶನ್ ರಾಜ್ಯ ಸಮ್ಮೇಳನದಂಗವಾಗಿ ನಡೆಯುವ ಕಾಸರಗೋಡು ಜಿಲ್ಲಾ ಸಮ್ಮೇಳನ ಈ ತಿಂಗಳ ೧೭ರಂದು ಕುಂಬಳೆ ಶ್ರೀ ಗೋಪಾಲಕೃಷ್ಣ ಸಭಾಂಗಣದಲ್ಲಿ ನಡೆಯಲಿದೆ ಎಂದು ಪದಾಧಿಕಾರಿಗಳು ಸುದ್ಧಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇದರಂಗವಾಗಿ ಮೆರವಣಿಗೆ, ಪ್ರತಿನಿಧಿ ಸಮ್ಮೇಳನ, ವಯರಿಂಗ್, ಪ್ಲಂಬಿಂಗ್ ಉತ್ಪನ್ನ ಪ್ರದರ್ಶನ, ಸಾಂತ್ವನ ಸಹಾಯ ವಿತರಣೆ ನಡೆಯಲಿದೆ. ಪ್ರತಿನಿಧಿ ಸಮ್ಮೇಳನವನ್ನು ರಾಜ್ಯ ಅಧ್ಯಕ್ಷ ಪಿ.ವಿ. ರಾಜೇಶ್ ಉದ್ಘಾಟಿಸುವರು. ಜಿಲ್ಲಾಧ್ಯಕ್ಷ ರಾಜು ಕಪ್ಪಣಕ್ಕಾಲ್ ಅಧ್ಯಕ್ಷತೆ ವಹಿಸುವರು. ರಾಜ್ಯ, ಜಿಲ್ಲಾ ಮುಖಂಡರು ಭಾಗವಹಿಸುವರು. ರಾಜ್ಯ ಅಸಿಸ್ಟೆಂಟ್ ಕಾರ್ಯದರ್ಶಿ ಬಿ. ಸುರೇಶ್ ಕುಮಾರ್, ಶಾಂತ ಕುಮಾರ್, ಶ್ರೀಜಿತ್, ವಿದ್ಯಾಧರನ್ ಭಾಗವಹಿಸುವರು. ಉಚಿತ ವಯರಿಂಗ್ ನಡೆಸಿದ ಘಟಕಗಳಿಗಿರುವ ಪ್ರಶಸ್ತಿ, ಶಿಕ್ಷಣ ಪ್ರಶಸ್ತಿ, ಸಹಾಯ ವಿತರಣೆ, ಕೃಷಿ ಪ್ರಶಸ್ತಿ ವಿತರಣೆ ನಡೆಯಲಿದೆ. ಈ ಬಗ್ಗೆ ನಡೆದ ಸುದ್ಧಿಗೋಷ್ಠಿಯಲ್ಲಿ ರಾಜು ಕಪ್ಪಣಕ್ಕಾಲ್, ಬಿ. ಸುರೇಶ್ ಕುಮಾರ್, ರಜೀಶ್ ಎಂ.ಆರ್, ಅಬ್ದುಲ್ಲ ಎ.ಎಂ, ತಂಬಾನ್ ಪಿ, ಸತೀಶ್ ಕುಮಾರ್ ಆಳ್ವ, ಮಣಿ ಟಿ.ವಿ. ಭಾಗವಹಿಸಿದರು.







