ಎಡ-ಬಲ ರಂಗಗಳು ಒಂದಾಗುವ ಕಾಲ ಸಮೀಪದಲ್ಲಿದೆ- ಎಂ.ಎಲ್. ಅಶ್ವಿನಿ

ಕುಂಬಳೆ: ಬಿಜೆಪಿ ಕುಂಬಳೆ ಪಂಚಾಯತ್ ಸಮಿತಿಯ ಚುನಾವಣಾ ಕಾರ್ಯಾಲಯವನ್ನು ಬಿಜೆಪಿ ಜಿಲ್ಲಾ ಧ್ಯಕ್ಷೆ ಅಶ್ವಿನಿ ಎಂ.ಎಲ್. ಉದ್ಘಾಟಿಸಿ ದರು. ಎಡ-ಬಲ ಒಕ್ಕೂಟಗಳು ಒಂದಾಗುವ ಕಾಲ ಸಮೀಪದಲ್ಲಿದೆ ಎಂದು ಅಶ್ವಿನಿ ನುಡಿದರು. ಬಿಹಾರ ಸಹಿತ ಹೆಚ್ಚಿನ ಎಲ್ಲಾ ರಾಜ್ಯಗಳಲ್ಲಿ ಕಾಂಗ್ರೆಸ್ ಹಾಗೂ ಎಡ ಒಕ್ಕೂಟಗಳು ಇತರ ಪಕ್ಷಗಳೊಂದಿಗೆ ಸೇರಿ ಒಂದಾಗಿ ಸ್ಪರ್ಧಿಸಿದರೂ ಎನ್‌ಡಿಎಯನ್ನು ಸೋ ಲಿಸಲು ಸಾಧ್ಯವಾಗದಿರಲು ಕಾರಣ ನರೇಂದ್ರ ಮೋದಿ ಸರಕಾರ ಜ್ಯಾರಿಗೊಳಿ ಸಿದ ಜನಕ್ಷೇಮ ಯೋಜನೆಗಳು ಮತ್ತು ಅಭಿವೃದ್ಧಿ ಎಂದು ಅವರು ನುಡಿದರು. ಆಡಳಿತ ನಡೆಸುವ ಮುಸ್ಲಿಂ ಲೀಗ್‌ನ ಭ್ರಷ್ಟಾಚಾರದಿಂದ ಕುಂಬಳೆಯ ಜನತೆ ರೋಸಿಹೋಗಿದ್ದು, ಬಿಜೆಪಿಯತ್ತ ಒಲವು ತೋರುತ್ತಿದ್ದಾರೆ. ಜನತೆಯ ಆಶಯಕ್ಕೆ ತಕ್ಕಂತೆ ಕಾರ್ಯಕರ್ತರು ಹಾಗೂ ಅಭ್ಯರ್ಥಿಗಳು ಪ್ರಯತ್ನಿಸಿ ಕುಂಬಳೆ ಪಂಚಾಯತ್‌ನಲ್ಲಿ ಪ್ರಥಮ ಬಾರಿಗೆ ಅಧಿಕಾರ ಹಿಡಿಯಲು ಗಮನ ಹರಿಸಬೇಕೆಂದು ಅಶ್ವಿನಿ ಕರೆ ನೀಡಿದರು. ಹಿರಿಯ ನಾಯಕರಾದ ವಿ. ರವೀಂದ್ರನ್ ಧ್ವಜಾರೋಹಣಗೈದರು.

ಬಿಜೆಪಿ ಕುಂಬಳೆ ದಕ್ಷಿಣ ವಲಯ ಅಧ್ಯಕ್ಷ ಸುಜಿತ್ ರೈ ಅಧ್ಯಕ್ಷತೆ ವಹಿಸಿ ದರು. ಕಲ್ಲಿಕೋಟೆ ವಲಯ ಉಪಾಧ್ಯಕ್ಷ ವಿಜಯ ಕುಮಾರ್ ರೈ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್, ಉಪಾಧ್ಯಕ್ಷ ಮುರಳೀಧರ ಯಾದವ್, ಮಂಡಲ ಅಧ್ಯಕ್ಷ ಸುನಿಲ್ ಅನಂತಪುರ, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಲತಾ ಎಸ್, ಮಂಡಲ ಕೋಶಾಧಿಕಾರಿ ರಾಧಾಕೃಷ್ಣ ರೈ ಮಡ್ವ, ಕುಂಬಳೆ ಪಂಚಾಯತ್ ಉತ್ತರ ವಲಯ ಅಧ್ಯಕ್ಷ ಶಿವಪ್ರಸಾದ್ ರೈ ಮಡ್ವ, ಪಕ್ಷದ ಮುಖಂಡರು, ಸ್ಪರ್ಧಿ ಸುವ ಅಭ್ಯರ್ಥಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು. ಪಂಚಾಯತ್ ಸಮಿತಿ ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಶೆಟ್ಟಿ ಸ್ವಾಗತಿಸಿ, ಉತ್ತರ ವಲಯ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ವಂದಿಸಿದರು.

You cannot copy contents of this page