ಮಂಜೇಶ್ವರ: ಪಂಚಾಯತ್ ವ್ಯಾಪ್ತಿಯ ತೂಮಿನಾಡು-ತಲಪ್ಪಾಡಿ ಮಧ್ಯೆಯ ಸರ್ವೀಸ್ ರಸ್ತೆ ಬಳಿ ಅಪಾರ ಪ್ರಮಾಣದ ತ್ಯಾಜ್ಯ ತುಂಬಿಕೊಂಡಿದ್ದು ದುರ್ವಾಸನೆ ಹಾಗೂ ಸಂಚಾರ ಸಮಸ್ಯೆ ಸೃಷ್ಟಿಯಾಗಿದೆ. ಕಾಸರಗೋಡು ಭಾಗದಿಂದ ಮಂಗಳೂರಿಗೆ ತೆರಳುವ ಸರ್ವೀಸ್ ರಸ್ತೆಯಲ್ಲಿ ತ್ಯಾಜ್ಯ ರಾಶಿ ಕಂಡುಬರುತ್ತಿದೆ. ಪ್ಲಾಸ್ಟಿಕ್, ಆಹಾರ ತ್ಯಾಜ್ಯಗಳು, ಪ್ಯಾಂಪರ್ಸ್ ಸಹಿತ ವಿವಿಧ ತ್ಯಾಜ್ಯಗಳು ಕಂಡುಬರುತ್ತಿದ್ದು, ಫುಟ್ಪಾತ್ ಸಂಪೂರ್ಣ ಹರಡಿಕೊಂ ಡಿದೆ. ತ್ಯಾಜ್ಯ ತೆರವುಗೊಳಿಸಿ ಶುಚೀಕ ರಿಸಲು ಸಾರ್ವಜನಿಕರು ಆಗ್ರಹಿಸಿದ್ದಾರೆ.






