ಬಾಯಾರು: ಪೆರ್ವೋಡಿ ಬಾಣಪ್ಪಾಡಿ ನಿವಾಸಿ ದಿ| ಸಂಕಪ್ಪ ನಾಯಕ್‌ರವರ ಪುತ್ರ ಬಿಜೆಪಿ ಹಿರಿಯ ನೇತಾರ, ಪಂಚಾಯತ್ ಮಾಜಿ ಸದಸ್ಯ ಕಿಶೋರ್ ಕುಮಾರ್ ನಾಯಕ್ [62] ನಿಧನ ಹೊಂದಿ ದರು. ಕಳೆದ ಒಂದು ವರ್ಷದಿಂದ ಅಸೌಖ್ಯದಿಂದ ಬಳಲುತ್ತಿದ್ದ ಇವರಿಗೆ ನಿನ್ನೆ ಸಂಜೆ ಮನೆಯಲ್ಲಿ ಅಸೌಖ್ಯ ಉಲ್ಬಣಗೊಂಡು ಉಪ್ಪಳದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಅಷ್ಟರಲ್ಲಿ ನಿಧನ ಸಂಭವಿಸಿದೆ. ಕೃಷಿಕರಾಗಿದ್ದು, ಪೈವಳಿಕೆ ಪಂಚಾಯತ್ ಮಾಜಿ ಸದಸ್ಯರೂ ಅಲ್ಲದೆ ಬಾಯಾರು ಸೇವಾ ಸಹಕಾರಿ ಬ್ಯಾಂಕ್‌ನ ಮಾಜಿ ನಿರ್ದೇಶಕರಾಗಿದ್ದರು. ಮೃತರು ತಾಯಿ ಚಂದ್ರಾವತಿ.ಎಸ್ ನಾಯಕ್, ಏಕ ಪುತ್ರಿ ಸಮೀಕ್ಷ, ಸಹೋದರ -ಸಹೋದರಿಯರಾದ ಗಣೇಶ, ಅಶೋಕ, ಕುಮುದ, ರುಕ್ಮಿಣಿ, ಸುಜಾತ, ಸುಕನ್ಯ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿ ದ್ದಾರೆ. ಮೃತರ ಮನೆಗೆ ಸಂಘ ಪರಿವಾರದ ನೇತಾರರು, ಕಾರ್ಯ ಕರ್ತರು, ಹಿತೈಷಿಗಳ ಸಹಿತ ಹಲ ವಾರು ಮಂದಿ ಭೇಟಿ ನೀಡಿ ಅಂ ತಿಮ ನಮನ ಸಲ್ಲಿಸಿದರು. ನಿಧನಕ್ಕೆ ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ, ಪೈವಳಿಕೆ ಪಂಚಾಯತ್ ಸಮಿತಿ ಸಂತಾಪ ಸೂಚಿದೆ.






