ಜಿಲ್ಲೆಯ ವಿವಿಧೆಡೆ ಪೊಲೀಸ್ ಕಾರ್ಯಾಚರಣೆ: ಬೃಹತ್ ಪ್ರಮಾಣದ ತಂಬಾಕು ಉತ್ಪನ್ನ ಪತ್ತೆ; ಮೂರು ಕಾರು ವಶ, ಇಬ್ಬರ ಸೆರೆ

ಕಾಸರಗೋಡು: ಜಿಲ್ಲೆಯ ವಿವಿಧೆಡೆ ಪೊಲೀಸರು ನಿನ್ನೆ ನಡೆಸಿದ ಕಾರ್ಯಾ ಚರಣೆಯಲ್ಲಿ ಭಾರೀ ಪ್ರಮಾಣದ ನಿಷೇಧಿತ ತಂಬಾಕು ಉತ್ಪನ್ನಗಳನ್ನು ವಶಪಡಿಸಲಾಗಿದೆ. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ಮೂರು ಕಾರುಗಳನ್ನು ವಶಕ್ಕೆ ತೆಗೆಯಲಾಗಿದೆ. ವಿದ್ಯಾನಗರ ಪೊಲೀಸರು ನಿನ್ನೆ  ನಡೆಸಿದ ಎರಡು ಕಾರ್ಯಾಚರಣೆಗಳಲ್ಲಾಗಿ ಭಾರೀ ಪ್ರಮಾಣದ ನಿಷೇಧಿತ ತಂಬಾಕು ಉತ್ಪನ್ನಗಳನ್ನು ಪತ್ತೆಹಚ್ಚಿ ವಶಪಡಿಸಿ ಕೊಂಡಿದ್ದಾರೆ.

ಚೆರ್ಕಳ ಪಾಡಿ ರಸ್ತೆ ಬಳಿ ಈ ಕಾರ್ಯಾಚರಣೆ ನಡೆದಿದೆ. ಈ ಸ್ಥಳದಲ್ಲಿ ನಿನ್ನೆ ಮೊದಲು ನಡೆಸಿದ ಕಾರ್ಯಾ ಚರಣೆಯಲ್ಲಿ ಕಾರೊಂದರಲ್ಲಿ ಸಾಗಿಸುತ್ತಿದ್ದ ಕೇರಳದಲ್ಲಿ ನಿಷೇಧ ಹೇರಲಾಗಿರುವ 12,218  ಪ್ಯಾಕೆಟ್ ತಂಬಾಕು ಉತ್ಪನ್ನ ಗಳನ್ನು ಪತ್ತೆಹಚ್ಚಿ ವಶಪಡಿಸಲಾಗಿದೆ.

ಇದಕ್ಕೆ ಸಂಬಂಧಿಸಿ ಮಧೂರು ಚೆಟ್ಟುಂಗುಳಿ ನಿವಾಸಿ ರಾಶೀದ್ ಎ (31) ಎಂಬಾತನನ್ನು ಸೆರೆ ಹಿಡಿದು ಪ್ರಕರಣ ದಾಖಲಿಸಲಾಗಿದೆ. ಮಾಲು ಸಾಗಿಸಲು ಉಪಯೋಗಿಸಿದ ಕಾರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಈ ಕಾರ್ಯಾಚರಣೆಯ ಬಳಿಕ ಲಭಿಸಿದ ಗುಪ್ತ ಮಾಹಿತಿಯಂತೆ ಪೊಲೀಸರು ಅದೇ ಸ್ಥಳದಲ್ಲಿ  ನಡೆಸಿದ ಎರಡನೇ ಕಾರ್ಯಾಚರಣೆಯಲ್ಲಿ ಇನ್ನೊಂದು ಕಾರಿನಲ್ಲಿ ಸಾಗಿಸುತ್ತಿದ್ದ 7600 ಪ್ಯಾಕೆಟ್ ನಿಷೇಧಿತ ತಂಬಾಕು ಉತ್ಪನ್ನಗಳನ್ನು ಪತ್ತೆಹಚ್ಚಿ ವಶಪಡಿಸಲಾ ಗಿದೆ. ಈ ವೇಳೆ ಆ ಕಾರಿನಲ್ಲಿದ್ದವರು ಪರಾರಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಮೂಲು ಸಾಗಿಸಿದ ಕಾರನ್ನೂ ಪೊಲೀಸರು ವಶಕ್ಕೆ ತೆಗೆದುಕೊಡಿದ್ದಾರೆ.

ವಿದ್ಯಾನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಕೆ.ಪಿ. ಶೈನ್‌ರ ನೇತೃತ್ವದಲ್ಲಿ ಎಸ್.ಐ ಉಮೇಶನ್, ಜ್ಯೂನಿಯರ್ ಎಸ್‌ಐ ಸಫ್ವಾನ್, ಎಸ್‌ಪಿಯ ವಿಶೇಷ ಸ್ಕ್ವಾಡ್‌ನ  ಎಸ್‌ಐ ನಾರಾಯಣನ್ ಎಂಬವರು ಒಳಗೊಂಡ ಪೊಲೀಸರ ತಂಡ ಈ ಕಾರ್ಯಾಚರಣೆ ನಡೆಸಿದೆ.

ಮಂಜೇಶ್ವರ: ಮಂಜೇಶ್ವರ ಪೊಲೀಸರು ನಿನ್ನೆ ನಡೆಸಿದ ಕಾರ್ಯಾ ಚರಣೆಯಲ್ಲಿ 26,112 ಪ್ಯಾಕೆಟ್ ತಂಬಾಕು ಉತ್ಪನ್ನಗಳನ್ನು ವಶಪಡಿಸಲಾ ಗಿದೆ. ಈ ಸಂಬಂಧ ಕುಬಣೂರು ಅಗ ರ್ತಿಮೂಲೆ  ಫೌಸಿಯ ಮಂಜಿಲ್‌ನ ಮೊಯ್ದೀನ್ ಕುಂಞಿ (47) ಎಂಬಾತನನ್ನು ಬಂಧಿಸಲಾಗಿದೆ. ನಿನ್ನೆ ಮಧ್ಯಾಹ್ನ 1 ಗಂಟೆಗೆ ಎಸ್‌ಐ ರತೀಶ್ ನೇತೃತ್ವದ ಪೊಲೀಸರು ತಲಪಾಡಿ ಅರಣ್ಯ ಇಲಾಖೆ ಚೆಕ್ ಪೋಸ್ಟ್ ಸಮೀಪ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಮಂಗಳೂರು ಭಾಗದಿಂದ ಬಂದ ಕಾರಿನಲ್ಲಿ 30 ಗೋಣಿಚೀಲಗಳಲ್ಲಿ ತುಂಬಿಸಿಟ್ಟ 26112 ಪ್ಯಾಕೆಟ್ ತಂಬಾಕು ಉತ್ಪನ್ನಗಳು ಪತ್ತೆಯಾಗಿವೆ. ಇವುಗಳಿಗೆ ಸುಮಾರು ಒಂದೂವರೆ ಲಕ್ಷ ರೂಪಾಯಿ ಮೌಲ್ಯ ಅಂದಾ ಜಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಕಾರು ಹಾಗೂ ತಂಬಾಕು ಉತ್ಪನ್ನಗಳನ್ನು ಪೊಲೀಸರು ವಶಪಡಿಸಿ ಬಂಧಿತ ಮೊಯ್ದೀನ್ ಕುಂಞಿಗೆ ನೋಟೀಸ್ ನೀಡಿ ಬಿಡುಗಡೆ ಗೊಳಿಸಿದ್ದಾರೆ. ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಎಸ್‌ಐ ಜತೆಗೆ ಪ್ರೊಬೆಶನರಿ ಎಸ್‌ಐ ಶಬರಿಕಷ್ಣನ್, ಎಎಸ್‌ಐ ರಾಜೇಶ್, ಚಾಲಕ ಸಂದೀಪ್ ಎಂಬಿವರಿದ್ದರು.

You cannot copy contents of this page